ಧಾರ್ಮಿಕ ಶಿಕ್ಷಣ ಕೇಂದ್ರ ಪ್ರಕಲ್ಪದ 24 ನೇ ಕೇಂದ್ರ ಇಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಶ್ರೀ ಯು ಪೂವಪ್ಪ ಧರ್ಮಕರ್ತರು ಶ್ರೀ ಗುರು ರಾಘವೇಂದ್ರ ಮಠ ಕಲ್ಲಾರೆ ಇವರು ನಡೆಸಿ ಇಂದಿನ ಮಕ್ಕಳಿಗೆಮನೆಯಲ್ಲಿ ಧಾರ್ಮಿಕ ಶಿಕ್ಷಣಸಿಗುತ್ತಿಲ್ಲ ಹಾಗಾಗಿ ಇದು ಅತ್ಯಂತ ಪ್ರಸ್ತುತ ಮತ್ತು ಅಗತ್ಯದ್ದು ಅಂದರು.

ಶ್ರೀ ಕೇಶವಪ್ರಸಾದ್ ಮುಳಿಯ ದೇವಾಲಯ ಸಂವರ್ಧನ ಸಮಿತಿ ಪ್ರಮುಖ ಮಂಗಳೂರು ವಿಭಾಗ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ
ಧಾರ್ಮಿಕ ಶಿಕ್ಷಣದಲ್ಲಿ ಶ್ಲೋಕಗಳು, ಆಚಾರ -ವಿಚಾರ ಕಗ್ಗವಾಚನ, ಭಗವದ್ಗೀತೆ, ಕುಣಿತ ಭಜನೆ , ಮುಂತಾದ ವಿಚಾರಗಳನ್ನು ಹೇಳಿಕೊಡುವುದಲ್ಲದೆ ಜೀವನ ಮೌಲ್ಯಗಳನ್ನು ಕೂಡಾ ಮಕ್ಕಳಿಗೆ ಹೇಳಿಕೊಡಲಾಗುವುದು ಎಂದರು.
ನಗರ ಸಭೆ ಸದಸ್ಯರಾದ ಶ್ರೀ ಮನೋಹರ ಕಲ್ಲಾರೆ ಇವರು ಶುಭನುಡಿಗಳನ್ನಾಡಿದರು ನಿರ್ವಹಣೆಯನ್ನು ಉಮಾ ಡಿ ಪ್ರಸನ್ನ ಇವರು ನಡೆಸಿಕೊಟ್ಟರು.
ಅಟಲ್ ಉದ್ಯಾನ ಹಿಂದೂ ಧಾರ್ಮಿಕ ಶಿಕ್ಷಣದ ಮಕ್ಕಳು ಮತ್ತು ಪಾಂಗಲಾಯಿ ಅರಸು ಮುಂಡಿತ್ತಾಯ ಕೇಂದ್ರದ ಮಕ್ಕಳು ಧಾರ್ಮಿಕ ಶಿಕ್ಷಣ ದ ಕುರಿತು ಕಾರ್ಯಕ್ರಮಗಳನ್ನು ನೀಡಿದರು,
ಬೋಧಕಿಯರಾದ ಡಾ.ವಿಜಯ ಸರಸ್ವತಿ, ಶಂಕರಿ ಶರ್ಮ, ಶರಾವತಿ ರವಿ ನಾರಾಯಣ್, ವೀಣಾ ಬಿಕೆ, ಜಯಶ್ರೀ ಚಂದ್ರಪ್ರಭಾ, ಪ್ರಭಾವತಿ ಇತರರು ಉಪಸ್ಥಿತರಿದ್ದರು,
ಕಾರ್ಯಕ್ರಮದ ಸ್ವಾಗತವನ್ನು ಸುಮಂಗಲ ಗಿರೀಶ್ ಹಾಗೂ ವಂದನೆಯನ್ನು ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ನೆರವೇರಿಸಿದರು ತದನಂತರದಲ್ಲಿ ಮೊದಲ ತರಗತಿ ನಡೆಯಿತು ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಕೊಳತ್ತಾಯ , ವತ್ಸಲಾ ರಾಜ್ನಿ ವಿಶೇಷವಾಗಿ ಉಪಸ್ಥಿತರಿದ್ದರು, ಕಾರ್ಯಕ್ರಮದ ಜವಾಬ್ದಾರಿಯನ್ನು ಶ್ರೀಮತಿ ಕವಿತಾ ಕೊಳತ್ತಾಯ ಇವರು ನೆರವೇರಿಸಿದರು


























