ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ ಹಿನ್ನಲೆ: ಪದ್ಮನಾಭ ಸಪಲ್ಯ ಬಿಜೆಪಿ ಪಕ್ಷದಿಂದ ಉಚ್ಚಾಟನೆ.!!!
ವಿಟ್ಲ: ಇಡ್ಕಿದು ಗ್ರಾಮದ ಕೊಪ್ಪ ಎಂಬಲ್ಲಿ ಮನೆಗೆ ಹೋಗುವ ರಸ್ತೆಯಲ್ಲಿ ಗೇಟ್ ಗೆ ಬೀಗ ಹಾಕುವ ಸಂದರ್ಭ ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಘಟನೆ ನಡೆದಿತ್ತು.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಎಂಬವರ ಮೇಲೆ ಪ್ರಕರಣ ದಾಖಲಾಗಿತ್ತು.
ಇದೀಗ ಪದ್ಮನಾಭ ಸಪಲ್ಯ ಇವರನ್ನು ಬಿಜೆಪಿ ಯ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಉಚ್ಚಾಟನೆ ಮಾಡಲಾಗಿದೆ.
ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿದ್ಯ ಕೊಡುವ ಪಾರ್ಟಿಯಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಘನತೆ, ಗೌರವ ವರ್ಚಸ್ಸಿಗೆ ಘಾಸಿಯುಂಟುಮಾಡಿರುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ತಿಳಿಸಿದ್ದಾರೆ.