ಮಂಗಳೂರು: ನಗರ ಪೊಲೀಸ್ ಕಮಿಶನರೇಟ್ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಡ್ರೋನ್ ಬಳಕೆ, ಹಾರಾಟ ಮತ್ತು ಚಿತ್ರೀಕರಣವನ್ನು ನಿಷೇಧಿಲಾಗಿದೆ .
ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಈ ಆದೇಶ ಹೊರಡಿಸಿದ್ದು ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಯಾವುದೇ ಘಟನೆಗಳು ನಡೆಯದಂತೆ ಸುರಕ್ಷತೆಯ ದೃಷ್ಟಿಯಿಂದ ಡ್ರೋನ್ ರೂಲ್ಸ್ 2021 ರೂಲ್ಸ್ 24 ರ ಅಡಿಯಲ್ಲಿ ಈ ಆದೇಶ ಹೊರಡಿಸಿದ್ದು ದಿನಾಂಕ 10-05-2025 ರಿಂದ 14- 05-2025 ರವಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.