ಪುತ್ತೂರು : ಬನ್ನೂರು ನೆಕ್ಕಿಲದಲ್ಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ರೋಟರಿ ಕ್ಲಬ್ ಪುತ್ತೂರು ಇವರ ಸಹಯೋಗದೊಂದಿಗೆ ಸ್ಥಾಪನೆಯಾಗುವ ಬಯೋಗ್ಯಾಸ್ ಸ್ಥಾವರದ ಶಂಕುಸ್ಥಾಪನೆ ಕಾರ್ಯಕ್ರಮವು ಜೂ.21 ರಂದು ನಡೆಯಲಿದೆ.
ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರು, ರೋಟರಿ ಡಿಸ್ಟಿಕ್ 3181ನ ಡಿಸ್ಟಿಕ್ ಗವರ್ನರ್ ರೊ/ಎಂ. ರಂಗನಾಥ್ ಭಟ್ ಆಗಮಿಸಲಿದ್ದಾರೆ ಎಂದು ನಗರ ಸಭೆ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಪುತ್ತೂರು ರೋಟರಿ ಕ್ಲಬ್ ನ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.