ವಿಟ್ಲ: ವಿಟ್ಲದಲ್ಲಿ ವ್ಯಾಪಕವಾಗಿ ಕೋವಿಡ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ನಿರ್ಣಯದಂತೆ ಶನಿವಾರ ಮತ್ತು ಭಾನುವಾರ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ.

ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಮಾಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿನಿಂದ ಎರಡು ದಿನಗಳಿಂದ ಮಾಹಿತಿ ನೀಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಹಾಲಿನ ಅಂಗಡಿ ತೆರೆಯಲು ಅವಕಾಶವಿದೆ. ಬೇಕರಿ ಅಂಗಡಿಗಳನ್ನು ತೆರೆದು ಹಾಲು ಮಾರಾಟ ಮಾಡುವಂತಿಲ್ಲ. ಹಾಲಿನ ಡಿಪ್ಪೋದಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಔಷಧಿ ಅಂಗಡಿ ಸಂಜೆವರೆಗೆ ಕಾರ್ಯಾಚರಿಸಲು ಅವಕಾಶವಿದೆ. ಬ್ಯಾಂಕ್ ಸರಕಾರಿ ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅನಗತ್ಯವಾಗಿ ಜನರು ಹೊರಗಡೆ ಬರುವಂತಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಪೊಲೀಸರು ಕ್ರಮ ಜರುಗಿಸಲಿದ್ದಾರೆ. ಭಾನುವಾರವೂ ಇದೇ ನಿಯಮ ಜಾರಿಯಲ್ಲಿರುತ್ತದೆ ಎಂದು ಪಂಚಾಯತ್ ತಿಳಿಸಿದೆ.