ಪುತ್ತೂರು: ಕಬಕದ ಕುವೆತ್ತಿಲ ಎಂಬಲ್ಲಿ ಮೇ. 11 ರಂದು ನಡೆದ ಅಪಘಾತದಲ್ಲಿ ಬಂಟ್ವಾಳದ ತಂದೆ ಮತ್ತು ಮತ್ತು ಮಗ ಮೃತಪಟ್ಟ ಘಟನೆ ನಡೆದಿದ್ದು , ಘಟನಾ ಸ್ಥಳವನ್ನು ಪರಿಶೀಲಿಸಿ ಅಲ್ಲಿ ಅಪಘಾತ ನಡೆದಿರುವ ಸ್ಥಳದಲ್ಲಿ ಇರುವ ಅಪಾಯವನ್ನು ತೆರವುಮಾಡುವಂತೆ ರಾ.ಹೆದ್ದಾರಿ ಇಂಜನಿಯರ್ ಗುರುಪ್ರಸಾದ್ ಅವರಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.
ಸೋಮವಾರ ಕಚೇರಿಗೆ ಕರೆಸಿ ಮಾತುಕತೆ ನಡೆಸಿದ ಶಾಸಕರು ಅಪಗಾತ ನಡೆದ ಸ್ಥಳದ ರಸ್ತೆ ತಿರುವಿನಿಂದ ಕೂಡಿದೆ ಮತ್ತು ಅಲ್ಲಿ ಮರ ಮತ್ತು ಪೊದೆಗಳಿಂದ ರಸ್ತೆಯ ತಿರುವು ಮತ್ತು ವಿರುದ್ದ ದಿಕ್ಕಿನಿಂದ ಬರುವ ವಹನಗಳು ಸರಿಯಾಗಿ ಕಾಣುತ್ತಿಲ್ಲ. ಅಲ್ಲಿರುವ ಪೊದೆ ಮತ್ತು ಮರಗಳ ಗೆಲ್ಲನ್ನು ಕತ್ತರಿಸುವಂತೆ ಸೂಚನೆ ನೀಡಿದ ಶಾಸಕರು ರಸ್ತೆ ಬದಿಯಲ್ಲಿ ಅಪಘಾತ ಸ್ಥಳ ಎಂದು ನಾಮಫಲಕವನ್ನು ಹಾಕುವಂತೆ ಸೂಚನೆ ನೀಡಿದರು.
ಕಬಕದಲ್ಲಿ ನಡೆದ ಘಟನೆ ಅತ್ಯಂತ ದುಖದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇಂಥಹ ಅಪಘಾತಗಳು ನಡೆಯದಂತೆ ತಪ್ಪಿಸುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.