ಕಲ್ಲೆಟ್ಟಿ: ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಬರಿಮಾರು ಇಲ್ಲಿ ಮೇ 18 ರಂದು ವರ್ಷಾವಧಿ ನೇಮೋತ್ಸವ ನಡೆಯಲಿದ್ದು ಮೇ.12 ರಂದು ಗೊನೆ ಮುಹೂರ್ತ ನಡೆಯಿತು.
ದೈವಸ್ಥಾನದ ತಂತ್ರಿಗಳಾದ ಪಚ್ಚಡಿಬೈಲು ಸುಬ್ರಮಣ್ಯ ಭಟ್ ರವರ ಮಾರ್ಗದರ್ಶನದಲ್ಲಿ ಗೊನೆ ಮುಹೂರ್ತ ನಡೆದಿದ್ದು ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ಗುತ್ತಿನ ಮನೆಯವರು ಹಾಗೂ ಊರಿನ ಸಮಸ್ತರು ಪಾಲ್ಗೊಂಡಿದ್ದರು.