ಪುತ್ತೂರು:ಯಾವುದೇ ರೀತಿಯ ಕಾರ್ಯಕ್ರಮಗಳಾದರೂ ಒಪ್ಪುವಂತಹ ಛಾಯಾಗ್ರಹಣ, ವೀಡಿಯೋಗ್ರಾಫಿ ವ್ಯವಸ್ಥೆ, ಶುಭ ಸಮಾರಂಭಗಳಿಗೆ ಅಂದದ ಉಡುಗೊರೆ ನೀಡಬೇಕೆಂದರೆ ನವನವೀನ ಅಲಂಕಾರಿಕ ಮಗ್‌ಗಳು, ಕೀ ಬಂಚ್‌ಗಳು, ಲೈಟ್ ವೈಟ್ ಆಗಿದ್ದು ಡಬಲ್ ಸೈಡ್ ಬರುವಂತೆ ವಾಟರ್ ಪ್ರೂಫ್ ಫೋಟೋ ಆಲ್ಬಂಗÀಳು, ಕಂಪ್ಲೀಟ್ ಎಡಿಟಿಂಗ್ ಸೊಲ್ಯೂಷನ್‌ಗಳು, ಡ್ರೋನ್ ಸೌಲಭ್ಯ, ಫೋಟೋಶೂಟ್ ಹೀಗೆ ಆಧುನಿಕ ತಂತ್ರಜ್ಞಾನಕ್ಕೊಳಪಟ್ಟAತೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನೂ ನೀಡಲು ನೂತನವಾಗಿ ಶುಭಾರಂಭಗೊAಡಿದೆ ದೈವಾನುಗ್ರಹ ಡಿ ಡಿಜಿಟಲ್ ಸ್ಟುಡಿಯೋ ವಿಡಿಯೋ ಗಿಫ್ಟ್ ಮಳಿಗೆ.
ಕಳೆದ ಹತ್ತು ವರ್ಷಗಳಿಂದ ಉಪ್ಪಿನಂಗಡಿ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಕಟ್ಟಪುಣಿ ಇವರ ಮಾಲಕತ್ವದ ಸ್ಟುಡಿಯೋ ಇದೀಗ ರಾಮಕುಂಜ ಕಾಲೇಜು ರಸ್ತೆಯ ಎಎಲ್ ಕೊಹೃ ಕಾಂಪ್ಲೆಕ್ಸ್ನಲ್ಲಿ ಆರಂಭವಾಗಿದ್ದು, ನೂತನ ಮಳಿಗೆಗೆ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ಮತ್ತು ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಣರಾಜ್ ಕುಂಬ್ಳೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೆಸಿಐ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಶ್ರೀಮತಿ ಪ್ರಮೀಳ, ಬೇಬಿ ಆದ್ಯಾ, ಗುಣವತಿ , ಚಂದ್ರಶೇಖರ್, ರೋಹಿಣಿ, ತಾ ಪಂ ಸದಸ್ಯೆ ತೇಜಸ್ವಿನಿಶೇಖರ್ ಗೌಡ ಕಟ್ಟಪುಣಿ, ದಿವಾಕರ್ ಪಂಚವಟಿ, ಕೃಷ್ಣಪ್ರಸಾದ್ ನೂರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.