ಪೆರ್ಲ ಹಿತರಕ್ಷಣಾ ವೇದಿಕೆ ಪೆರ್ಲ ಶಿಬಾಜೆ ಗ್ರಾಮದ ವತಿಯಿಂದ ಭಂಡಿಹೊಳೆ ಚಲೋ -ಏರ್‌ಟೆಲ್ ಟವರ್ಸ್ ಲಿಮಿತೆಡ್ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು.
ಶಿಬಾಜೆ ಗ್ರಾಮದ ಪೆರ್ಲದಲ್ಲಿ ಆಗಬೇಕಾಗಿದ್ದ ಏರ್‌ಟೆಲ್ ಮೊಬೈಲ್ ಟವರ್ ಎರ್‌ಟೆಲ್ ಕಂಪೆನಿಯದ್ದೇ ಪಿತೂರಿಯಿಂದಾಗಿ ಭಂಡೀಹೊಳೆಗೆ ಸ್ಥಳಾಂತರಗೊAಡು , ಪೆರ್ಲ ಬಂಗೇರಡ್ಕ, ಪೊಸೋಡಿ, ನೀರಾಣ,ನಿಮುಡ, ಅಜಿರಡ್ಕ,ತಂಬ್ಲಾಜೆ, ಕಾಡುಹಿತ್ಲು, ಬರಮೇಲು, ಬಲ್ಲಡ್ಕ,ನೋಜಿ, ಖಂಡಿಗ ಪ್ರದೇಶದ ಜನರಿಗೆ ಏರ್‌ಟೆಲ್ ಸಂಸ್ಥೆಯವರು ೩ಕಿ,ಮೀ ಪವರ್ ಇರುವ ಟವರ್ ಹಾಕುವುದಾಗಿ ನಂಬಿಸಿ 1.5ಕಿ.ಮೀ ಪವರ್‌ನ ಟರ‍್ರ ನಿರ್ಮಿಸಿ, ಶಿಲಾನ್ಯಾಸ ಮಾಡಿ ಉದ್ಘಾಟನೆ ಮಾಡದೇ ದೀಪಾವಳಿಗೆ ಟವರ್ ಓಪನ್ ಮಾಡಿ ಪೆರ್ಲದ ಮೇಲ್ಕಾಣಿಸಿದ ಜನರು, ವಿದ್ಯಾರ್ಥಿಗಳು ನೆಟ್‌ವರ್ಕ್ ಸಂಪರ್ಕದಿAದ ವಂಚಿತರಾಗಿದ್ದು, ಈ ಬಗ್ಗೆ ಇನ್ನೊಂದು ಏರ್‌ಟೆಲ್ ಟವರ್ ಪೆರ್ಲದಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ, ಹಿತರಕ್ಷಣಾ ವೇದಿಕೆಯಿಂದ ನ.26ರಂದು ಪೆರ್ಲ ಸಾಲೆಯ ಬಳಿಯಿಂದ ಪಾದಾಯಾತ್ರೆ ಮೂಲಕ ಖಂಡಿಗ ಶಾಇರಾಡಿ ದೈವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ , ಬೈಕು ಕಾರು ಜಿಪು ವಾಹನಗಳ ಮೂಲಕ ಭಂಡಿಹೊಳೆ ಚಲೋ ಕಾರ್ಯಕ್ರಮವು ನಡೆಯಿತು.