ವಿಟ್ಲ: ವಿಟ್ಲ ಮುಡ್ನೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಲ್ಯಣ್ಣ ಪೂಜಾರಿ 42 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಅರ್ಕಲ್ ತೋಟ ನಿಧನದ ಹಿನ್ನಲೆ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪುರುಷೋತ್ತಮ್ ಸುವರ್ಣ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಲ್ಯಣ್ಣ ಪೂಜಾರಿ ಸ್ಪರ್ಧಿಸಿದ್ದರು.
ಬಿಜೆಪಿಯ ಭದ್ರಕೋಟೆಯಾಗಿದ್ದ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ 9 ಬಿಜೆಪಿ 3 ಎಸ್ ಡಿ ಪಿ ಐ ಸದಸ್ಯರಿದ್ದು ಕಾಂಗ್ರೆಸ್ ನ ಯಾವುದೇ ಸದಸ್ಯರಿರಲಿಲ್ಲ.
ಬಿಜೆಪಿ ಯ ಗ್ರಾಮಾಂತರ ಮಂಡಲ ಅಧ್ಯಕರ ವಾರ್ಡ್ ನ ಉಪಚುನಾವಣೆಗೆ ಬಿಜೆಪಿ ಮುಖಂಡರು ಸಾಕಷ್ಟು ಪ್ರಚಾರ ಮಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಪುತ್ತೂರಿನ ಶಾಸಕ ಅಶೋಕ್ ರೈ ಸ್ವತಃ ಪ್ರಚಾರಕ್ಕೆ ಆಗಮಿಸಿ ಭರ್ಜರಿ ಫೇಲ್ಡ್ ನಡೆಸಿದ್ದರು ಅಸಮಾಧಾನ ವಿರುವವರನ್ನು ಸೆಳೆದು ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.