ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಂಸ್ಥೆಯ ಮಾಲಕ ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂಬ ಕಾರಣಕ್ಕೆ ಆಕೆಯ ಪತಿ ಅಂಗಡಿ ಮಾಲಕರಿಗೆ ಏಟು ನೀಡಿದ ಹಾಗೂ ಪೋಲೀಸರು ಮಾಲಕನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
ಸುಳ್ಯದ ಹಳೆಗೇಟಿನಲ್ಲಿ ಈ ಘಟನೆ ನಡೆದಿದ್ದು. ಮಾಲಕ ಅಸ್ಪಕ್ ಎಂಬವರನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.