ಪುತ್ತೂರು : ಪಡುವನ್ನೂರು ಗ್ರಾಮದ ಅಂಬಟೆ ಮೂಲೆಯ ನಿವಾಸಿ ರಾಮ ನಾಯ್ಕ ಎಂಬವರು ಬಿದ್ದು ಮೂಲೆ ಮುರಿತಕ್ಕೊಳಗಾಗಿದ್ದು, ಅವರನ್ನು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಹಿಂದೂ ಜಾಗರಣ ವೇದಿಕೆಯ ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಡುವ ಮೂಲಕ ಮಾನವೀಯತೆ ಮೆರೆದರು.
ರಾಮ ನಾಯ್ಕ ಅವರ ಪತ್ನಿ ಸಹ 4 ವರ್ಷಗಳಿಂದ ಅನಾರೋಗ್ಯದಿಂದಾಗಿ ಮಲಗಿದ ಪರಿಸ್ಥಿತಿಯಲ್ಲಿ ಇದ್ದು, ಅವರ ಮನೆಗೆ ಸರಿಯಾದ ರಸ್ತೆಯ ವ್ಯವಸ್ಥೆಯು ಇಲ್ಲದೇ ಸಂಪರ್ಕ ರಸ್ತೆಯಿಂದ 500ಮೀಟರ್ ಕಿರಿದಾದ ದಾರಿಯಲ್ಲಿ ಹೊತ್ತುಕೊಂಡೇ ಬರಬೇಕಾದ ಅನಿವಾರ್ಯತೆ ಎದುರಾಗಿದೆ.