ಪುತ್ತೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಪುತ್ತೂರು ಕರ್ಮಲದಲ್ಲಿರುವ ಪ್ರಜ್ಞಾ ವಿಶೇಷ ಮಕ್ಕಳ ಕೇಂದ್ರಕ್ಕೆ ಬೆಳಿಗ್ಗೆಯ ಉಪಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈಯವರು ಮಾತನಾಡಿ ಸಮಾಜದಲ್ಲಿರುವ ವಿಶಿಷ್ಟ ಚೇತನರ ಆರೈಕೆ ಮಾಡುತ್ತಿರುವ ಇಂತಹ ಆಶ್ರಮಗಳು ಪುಣ್ಯದ ಕೆಲಸ ಮಾಡುತ್ತಿದೆ, ಅದಕ್ಕಾಗಿ ಜನಪರ, ಹಾಗೂ ದೇಶದ ಬಗ್ಗೆ ಅತೀವ ಕಾಳಜಿ ಇರುವ ದೇಶದ ಭರವಸೆಯ ನಾಯಕ ರಾಹುಲ್ ಗಾಂಧಿಯವರ ಜನ್ಮದಿನವನ್ನು ಈ ರೀತಿ ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಆಚರಿಸಿರುವ ಪುತ್ತೂರು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಬನ್ನೂರು ಸ್ವಾಗತಿಸಿ ಶ್ರೀಮತಿ ಶಾರದಾ ಅರಸ್ ವಂದಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ನ ಶ್ರೀಮತಿ ಸನಮ್ ನಜಿರ್, ಶ್ರೀಮತಿ ಪ್ರತೀಕ ಪೂರ್ಣೇಶ್, ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಕಲಾವತಿ ಎಸ್ ಗೌಡ, ಕಾಂಗ್ರೆಸ್ ಕಾರ್ಯಕರ್ತರಾದ ಸಿರಿಲ್ ರೊಡ್ರಿಗಸ್, ಸಂಜೀವ ಗೌಡ ಕಲಾಯಿ, ಕಾಂಗ್ರೆಸ್ ಕೋವಿಡ್ ಸೇವಕ್ ಸಿಮ್ರಾನ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಪೂರ್ಣೇಶ್ ಭಂಡಾರಿ ಉಪಸ್ಥಿತರಿದ್ದರು.