ಮುಂಡೂರು : ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇವರ ವತಿಯಿಂದ ಮನೆಗೊಂದು ತುಳಸಿ ಕಟ್ಟೆ ಮನಸ್ಸಿಗೊಂದು
ಭಗವಧ್ಗೀತೆ ಅನ್ನೋ ಪರಿಕಲ್ಪನೆಯಡಿಯಲ್ಲಿ ಹಿಂದೂ ಮನೆಗಳಿಗೆ ತುಳಸಿ ಕಟ್ಟೆ ವಿತರಿಸುವ ವಿನೂತನ ಕಾರ್ಯಕ್ರಮ ನಡೆಯಿತು.
ವಿದೇಶಿ ಸಂಸ್ಕೃತಿಯನ್ನು ಅನುಸರಿಸುವ ಮಾನಸಿಕತೆಯನ್ನು ಮೆಟ್ಟಿ ನಿಂತು ಸನಾತನ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಶಯಡೊಡನೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗ್ರಾಮದಲ್ಲಿರುವ ಎಲ್ಲಾ ಹಿಂದೂ ಮನೆಗಳ ಸಮೀಕ್ಷೆ ಮಾಡಿ ತುಳಸಿ ಕಟ್ಟೆ ಮತ್ತು ಭಗವದ್ಗೀತೆ ಪುಸ್ತಕ ಇಲ್ಲದ ಮನೆಗಳಿಗೆ ಸಂಘಟನೆ ವತಿಯಿಂದ ತುಳಸಿಕಟ್ಟೆ ಮತ್ತು ಪುಸ್ತಕಗಳನ್ನು ಕೊಡಬೇಕೆಂಬ ಮಹದಾಸೆಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮುಂಡೂರು ಗ್ರಾಮದ ಪುತ್ತಿಲ ಎಂಬಲ್ಲಿರುವ ದೇವಪ್ಪ ಮುಗೇರ ಎಂಬವರ ಗೃಹ ಪ್ರವೇಶದ ದಿನ ಅಧಿಕೃತವಾಗಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್ ಅವರು ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ ಮತ್ತು ಬಾಲಕೃಷ್ಣ ಪೂಜಾರಿ ಯವರ ಅವರ ಉಪಸ್ಥಿತಿಯಲ್ಲಿ ದೇವಪ್ಪ ದಂಪತಿಗಳಿಗೆ ತುಳಸಿಕಟ್ಟೆ ಹಸ್ತಾಂತರಿಸುವುದರ ಮೂಲಕ ಚಾಲನೆ ನೀಡಿದರು.
ಪ್ರಮುಖರಾದ ಅರುಣ್ ಪುತ್ತಿಲ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘಟನೆ ಪ್ರಮುಖರಾದ ಪ್ರಸಾದ್ ಬಿಕೆ, ಧನಂಜಯ ನಾಯ್ಕ್,ಸತೀಶ್, ವಸಂತ ರೈ, ಧನುಷ್, ಸಂತೋಷ್ ಉಪಸ್ಥಿತರಿದ್ದರು.