ಪುತ್ತೂರು: ದಿನಾಂಕ 02.07.2025 ರಂದು ಸಂಜೆ, ಪುತ್ತೂರು, ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದ ಬಳಿ, SDPI ಪುತ್ತೂರು ವಿಧಾನಸಭಾ ಕ್ಷೇತ್ರ, ಪುತ್ತೂರು ವತಿಯಿಂದ ಅಧ್ಯಕ್ಷ ಅಶ್ರಫ್ ಬಾವು ಎಂಬವರು ಹಾಗೂ ಇತರೆ ಸುಮಾರು 30 ಜನರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮ ಗುಂಪು ಸೇರಿ, ಧ್ವನಿವರ್ಧಕವನ್ನು ಬಳಸಿ, ಪ್ರತಿಭಟನೆ ನಡೆಸಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಆರೋಪಿತರುಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 53-2025 ಕಲಂ 189(ಸಿ), ಬಿ.ಎನ್.ಎಸ್ ಮತ್ತು ಕಲಂ 109 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
























