ಪುತ್ತೂರು ಬಿಜೆಪಿ ಮಂಡಲದ ಮಹಿಳಾ ಪದಾಧಿಕಾರಿಗಳು ಸಂತ್ರಸ್ತೆಯ ಮನೆಗೆ ತೆರಳಿ ಸಾಂತ್ವನ ಹೇಳಿ ಧೈರ್ಯ ಕಳೆದುಕೊಳ್ಳಬೇಡಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಗೌರಿ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ , ನಗರ ಸಭೆ ಸದಸ್ಯರಾದ ಶ್ರೀಮತಿ ದೀಕ್ಷಾ ಪೈ , ಶ್ರೀಮತಿ ಇಂದಿರಾ ಆಚಾರ್ಯ, ಶ್ರೀಮತಿ ಪ್ರೇಮಲತಾ ನಂದಿಲ, ಒಬಿಸಿ ಮೋರ್ಚಾ ಜಿಲ್ಲಾ ಸದಸ್ಯೆ ಪ್ರಭಾ ಆಚಾರ್ಯ , ಗ್ರಾಮಾಂತರ ಮಂಡಲ ಉಪಾಧ್ಯಕ್ಷೆ ಶ್ರೀಮತಿ ದಿವ್ಯ , ನಗರ ಮಹಿಳಾ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಶಗ್ರೀತ್ತಾಯ ಮತ್ತಿತರರು ಉಪಸ್ಥಿತರಿದ್ದರು.