ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ-ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನ.27ರಂದು ಬೈಕ್ ಮತ್ತು ಬೊಲೆರೊ ಜೀವು ನಡುವೆ ಡಿಕ್ಕಿಸಂಭವಿಸಿ ಬೈಕ್ ಸವಾರ ಪರ್ಲಡ್ಡದ ಹಾಸೀಮ್ ಎಂಬವರು ಮೃತಪಟ್ಟಿದ್ದಾರೆ.
ಮೀನು ವ್ಯಾಪಾರಿ ಪರ್ಲಡ್ಡ ಹಾಜಿ ಸಂರು ಅವರ ಪುತ್ರ ಮೊಹಮ್ಮದ್ ಹಾಸಿಮ್(20)ವ.ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಬೈಪಾಸ್ ರಸ್ತೆಗೆ ಎಂಟ್ರಿ ಕೊಡುತ್ತಿದ್ದ ಬೊಲೆರೋ ಜೀಪು ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಬೈಕ್ ಸವಾರ ಮೊಹಮ್ಮಗೆಹಾಸಿಮ್ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆಕರೆದೊಯ್ಯಲಾಗಿತ್ತಾದರೂ ಫಲಕಾರಿಯಾಗದೆ ಅವರು ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಅವಿವಾಹಿತರಾಗಿದ್ದ ಮೊಹಮ್ಮದ್ ಹಾಸೀಮ್ ಅವರು ಮೀನುಮಾರುಕಟ್ಟೆ ಬಳಿ ಹೊಸದಾಗಿಪ್ರಾರಂಭಗೊಂಡಿರುವ ಮೆಡಿಕಲ್ ವ್ಯವಹಾರ ನೋಡಿಕೊಳ್ಳುತ್ತಿದ್ದು ಸಂಜೆ ವೇಳೆ ಮಡಿಕಲ್ಗೆಬರುತ್ತಿದ್ದ ಸಮಯ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರು ತಂದೆ.ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಇಂದು ಮೀನು ವ್ಯಾಪಾರ ಬಂದ್
ಮೊಹಮ್ಮದ್ ಹಾಸೀಮ್ ಅವರ ಸಾವಿನಹಿನ್ನೆಲೆಯಲ್ಲಿ ನ.28ರಂದು ಪುತ್ತೂರಿನಲ್ಲಿ ಹಸಿಮೀನು ವ್ಯಾಪಾರ ಇರುವುದಿಲ್ಲ ಎಂದು ಸಂಘದ ಅಬೂಬಕ್ಕರ್ ತಿಳಿಸಿದ್ದಾರೆ.