ಆಗಸ್ಟ್ 2, 2025: ಭಕ್ತಿಗೀತೆಗಳ ಲೋಕಕ್ಕೆ ಮತ್ತೊಂದು ಭಕ್ತಿಯ ಮಧುರ ಗೀತೆ ಇಂದು ಸೇರ್ಪಡೆಯಾಗಿದೆ. ಇಂದು ಶ್ರೀ ನವ ದುರ್ಗಾ ಮಂತ್ರಾಮೂರ್ತಿ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ಶ್ರೀ ಕೆ ಯೋಗೀಶ್ ಭಟ್ ಚಿಂತನೆ ಯಲ್ಲಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಬಹರೇನ್ ಇಂದ ಆಗಮಿಸಿದ ಶ್ರೀಯುತ ನವೀನ್ ಮಾವಜಿ. ಹಾಗು ಹನುಮಾನ್ ಭಟ್. ರಾಜೇಂದ್ರ ಮಂಗಳೂರು ಪ್ರಗತ್ ಪುತ್ತೂರು ಇನ್ನಿತರ ಗಣ್ಯರು ಉಪಸ್ಥಿತಿಯಿದ್ದರು ಸಂಗೀತಾಭಿಮಾನಿಗಳ ನಿರೀಕ್ಷೆಯ ನಡುವೆಯೇ, ಇಂದು ಹೊಸ ತುಳು ಹಾಡು ಲೇ ಲೇ ಲೇಲೆಗಾ ಹಾಡು ಅಧಿಕೃತವಾಗಿ ಬಿಡುಗಡೆಗೊಂಡಿದೆ.
ಈ ಗೀತೆಯು ತನ್ನ ವಿಶಿಷ್ಟ ಧ್ವನಿ ಸಂಯೋಜನೆ, ಸ್ಫೂರ್ತಿದಾಯಕ ಸಾಹಿತ್ಯ ಮತ್ತು ಮನಮೆಚ್ಚಿಸುವ ಹಾಡುಗಾರಿಕೆಯಿಂದ ಪ್ರೇಕ್ಷಕರ ಹೃದಯ ಗೆಲ್ಲುವ ಭರವಸೆಯೊಂದಿಗೆ ಬಂದಿದೆ. ಶ್ರೀಮತಿ ರೇಷ್ಮಾ ಆರ್ ಕೆ. ಹಾಗು ಕುಮಾರಿ ಧನ್ಯ ಆರ್ ಕೆ ನಿರ್ಮಾಣದಲ್ಲಿ
ಈ ಹಾಡನ್ನು ತುಳುನಾಡ ಗಾನ ಗಂಧರ್ವ ಜಗದೀಶ್ ಪುತ್ತೂರು ಅವರ ಸಂಗೀತ ನಿರ್ದೇಶನದಲ್ಲಿ ಹಾಗೂ ತನ್ನದೇ ಧ್ವನಿಯಲ್ಲಿ ಬಿಡುಗಡೆ ಮಾಡಲಾಗಿದೆ. ಗೀತೆಯ ಸಾಹಿತ್ಯ ಶ್ರೀ ವಾದಿರಾಜ ತೀರ್ಥರ ರಚನೆಯ ಈ ದಾಸರ ಪದ. ಜಗದೀಶ್ ಪುತ್ತೂರು
ಯೂಟ್ಯೂಬ್‌ನಲ್ಲಿ ಹಾಗೂ ಎಲ್ಲ ಪ್ರಮುಖ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗಾಗಲೇ ಲಭ್ಯವಿದ್ದು, ಕೆಲವೇ ಗಂಟೆಗಳಲ್ಲೇ ಸಾವಿರಾರು ವೀಕ್ಷಣೆಗಳನ್ನು ಮುಟ್ಟಿದೆ.