ಪುತ್ತೂರು: ದ.ಕ.ಜಿಲ್ಲೆಯಲ್ಲಿ ಜೂ.21ರಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜೂನ್ 28ರವರೆಗೆ ಅಥವಾ ಜುಲೈ 5ರ ವರೆಗೆ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಡಿಸಿ ಸ್ಪಷ್ಪಪಡಿಸಿದ್ದಾರೆ.
- ಜಿಲ್ಲೆಯಲ್ಲಿ ಜ.5ರವರೆಗೆ ಲಾಕ್ಡೌನ್ ಮುಂದುವರಿಕೆ.
- ಅಗತ್ಯ ಸಾಮಾಗ್ರಿ ಖರೀದಿಗೆ ಬೆ. 7ರಿಂದ ಮ.1ರವರೆಗೆ ಅವಕಾಶ.
- ಪ್ರತೀ ದಿನ ರಾತ್ರಿ 7 ರಿಂದ ಬೆ. 7ರವರೆಗೆ ನೈಟ್ ಕರ್ಪೂ ಜಾರಿ.
- ಶುಕ್ರವಾರ 7 ರಿಂದ ಸೋಮವಾರ 7ರವರೆಗೆ ವಾರಾಂತ್ಯ ಕರ್ಫ್ಯೂ.
- ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
- ಟ್ಯಾಕ್ಸಿ, ಆಟೋ ರಿಕ್ಷಾಗೆ ಅವಕಾಶ, ಗರಿಷ್ಠ ಇಬ್ಬರಿಗಷ್ಟೇ ಅವಕಾಶ.