ಬೆಂಗಳೂರು: ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯದಾದ್ಯಂತ ನಾಳೆಯಿಂದ 3,000 ಬಸ್ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಸೋಮವಾರದಿಂದ ಅಂದ್ರೆ ನಾಳೆಯಿಂದ ಕೆಎಸ್ಆರ್ಟಿಸಿಯ 3 ಸಾವಿರ ಬಸ್ಗಳು ಕಾರ್ಯಾಚರಣೆ ಆರಂಭಿಸಲಿದ್ದು ಶೇಕಡಾ 50 % ಪ್ರಯಾಣಿಕರಿಗೆ ಅವಕಾಶವಿರಲಿದೆ ಎಂದು ಕೆಎಸ್ಆರ್ಟಿಸಿ ಹೇಳಿದೆ. ಜೊತೆಗೆ ಪ್ರಾರಂಭಿಕವಾಗಿ ಸುಮಾರು 3 ಸಾವಿರ ಬಸ್ಗಳು ಕಾರ್ಯಾಚರಣೆ ನಡೆಸಲಿವೆ, ಅಂತರ್ರಾಜ್ಯ ಮಾರ್ಗಗಳ ಸಂಚಾರಗಳಿಗೆ ಆಯಾ ರಾಜ್ಯಗಳ ಮಾರ್ಗಸೂಚಿ ಅನ್ವಯವಾಗಲಿ. ಮೈಸೂರ್ ಜಿಲ್ಲೆ ಹೊರತು ಪಡಿಸಿ ಇತರೆ ಜಿಲ್ಲೆ ಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಹಾಗೂ ದೂರ ಮಾರ್ಗದ ಅಂತರ್ ಜಿಲ್ಲಾ ಸಾರಿಗೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇನ್ನು ಬಸ್ ಕಾರ್ಯಾಚರಣೆ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನ ಪಾಲಿಸಬೇಕು ಎಂದು ಕೆಎಸ್ಆರ್ಟಿಸಿ ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.