ಪುತ್ತೂರು (ನ. 28)ಕರ್ನಾಟಕದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ ತುಂಬಾ ದುರ್ಬಲವಾಗಿದ್ದು ರಾಜ್ಯಾದ್ಯಂತ ನಿರಂತರ ಸಾವಿರಾರು ಗೋವುಗಳ ಹತ್ಯಾ ದಂಧೆ ನಡೆಯುತ್ತಲೇ ಇದೆ. ಹಿಂದೂಗಳಿಗೆ ಪೂಜ್ಯನೀಯವಾಗಿರುವ ಗೋಮಾತೆಗೆ ಹಿಂಸೆ, ವಧೆ ಮಾಡುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬರುವಂತಾಗಿದೆ… ಮೇಯಲು ಬಿಟ್ಟ ಗೋವುಗಳನ್ನು ಕೂಡಾ ಕದ್ದು ಸಾಗಿಸಿ ಕಸಾಯಿಖಾನೆಯಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ.
ಮೇಯಲು ಬಿಟ್ಟ ಗೋವುಗಳನ್ನು ಕೂಡಾ ಕದ್ದು ಸಾಗಿಸಿ ಕಸಾಯಿಖಾನೆಯಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ.. ಇದರ ಜತೆಗೆ ಪ್ರಸ್ತುತ ಸಾಮಾಜಿಕವಾಗಿ ಅನ್ಯಧರ್ಮೀಯ ಮತಾಂತರ ಎನ್ನುವ ಪ್ರಕರಣ ಆರಂಭವಾಗಿದ್ದು, ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಬಲೆಯಲ್ಲಿ ಸಿಲುಕುವ ಸನ್ನಿವೇಶಗಳು ನಿರ್ಮಾಣವಾಗಿದೆ. ಲವ್ ಜಿಹಾದ್ ,ಗೋ ಹತ್ಯೆ ನಿಷೇಧ ಕುರಿತಂತೆ ಕಠಿಣ ಕಾನೂನು ಕ್ರಮ ತರುವಂತೆ ಹಾಗು ಚಿಕ್ಕಮಗಳೂರಿನ ದತ್ತಪೀಠದಲ್ಲಿ ಖಾಯಂ ಅರ್ಚಕರನ್ನು ನೇಮಿಸುವಂತೆ ಆಗ್ರಹಿಸಿ BJP ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬಜರಂಗದಳ ದಕ್ಷಿಣ ಪ್ರಾಂತದ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ, ಪುತ್ತೂರು ಜಿಲ್ಲಾ ಸಂಯೋಜಕ ಶ್ರೀಧರ ತೆಂಕಿಲ, ಪುತ್ತೂರು ಪ್ರಖಂಡ ಸಹ ಸಂಯೋಜಕ ಜಯಂತ ಕುಂಜೂರುಪಂಜ, ವಿಶ್ವ ಹಿಂದು ಪರಿಷದ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು ಉಪಸ್ಥಿತರಿದ್ದರು