ಪುತ್ತೂರು: ಕಳೆದ ಸುಮಾರು 40 ದಿವಸಗಳಿಂದ ಕಾಮಗಾರಿ ಆರಂಭವಾಗಿದ್ದರು ಇನ್ನೂ ಶೇಕಡ 50 ಪರ್ಸೆಂಟ್ ಕಾಮಗಾರಿ ಪೂರ್ತಿಗೊಳ್ಳದೆ ಮಾಡಿರುವ ರಸ್ತೆ ಕಾಮಗಾರಿಗಳು ವಾಹನ ಸಂಚಾರ ಆರಂಭವಾದ ಎರಡನೇ ದಿವಸದಲ್ಲಿ ಇಂಟರ್ಲಾಕ್ ಕಿತ್ತುಕೊಂಡು ವಾಹನ ಸವಾರರಿಗೆ ಬಹಳಷ್ಟು ಸಂಕಷ್ಟವನ್ನು ತಂದು ಕೊಟ್ಟಿದೆ ಮತ್ತು ಈ ಕಾಮಗಾರಿ ಕಳಪೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಎಂದು ಅರುಣ್ ಕುಮಾರ್ ಪುತ್ತಿಲ ಆರೋಪಿಸಿದ್ದಾರೆ.
ಇಲಾಖಾಧಿಕಾರಿಗಳು ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರು ಈ ರಸ್ತೆಗೂ ನಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರನ್ನ ಮತ್ತಷ್ಟು ಕೆರಳಿಸಿದೆ. ಈ ರಸ್ತೆಯಿಂದಾಗಿ ಸಂಚರಿಸುವ ಬಹಳಷ್ಟು ವಾಹನ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆಗಳು ಕೂಡ ಸಂಭವಿಸಿದೆ. ಸಾರ್ವಜನಿಕರು ಮತ್ತು ವಾಹನ ಸವಾರರ ಅಪೇಕ್ಷೆಯಂತೆ ಕಿತ್ತು ಹೋಗಿರುವ ಇಂಟರ್ಲಾಕ್ ಗಳನ್ನ ಮತ್ತೆ ತೆಗೆದು ಈ ರಸ್ತೆಗೆ ಡಾಮರು ಅಥವಾ ಕಾಂಕ್ರಿಟ್ರೀಕರಣವನ್ನು ಮಾಡಬೇಕು.
ತಕ್ಷಣ ಇಲಾಖೆ ಅಧಿಕಾರಿಗಳು ಕ್ರಮವನ್ನ ಕೈಗೊಳ್ಳಬೇಕು ಈ ಕಾಮಗಾರಿಯನ್ನ ಮುಗಿಸಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ವಾಹನ ಚಾಲಕ ಮಾಲಕರು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ರಸ್ತೆ ತಡೆಯ ಮುಖಾಂತರ ಪ್ರತಿಭಟನೆ ಮಾಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ.