ಪುತ್ತೂರು: ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ಗೋಪಾಲ ನಾಯ್ಕ ಕಂಚಲಗುರಿ ಎಂಬವರು ಮಾಡಿ
ತೋರಿಸಿದ್ದಾರೆ.
ಪುತ್ತೂರಿನ ಬೆದ್ರಾಳ- ರಾಗಿಕುಮೇರು ಸಂಪರ್ಕ ರಸ್ತೆಯ ಸುಮಾರು 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗೋಪಾಲ
ನಾಯ್ಕ್ ರವರು ರಸ್ತೆಯ ಎರಡೂ ಬದಿಯ ಚರಂಡಿಯನ್ನು ಏಕಾಂಗಿಯಾಗಿ ಸ್ವಚ್ಚಗೊಳಿಸಿದ್ದಾರೆ. ಮಾತ್ರವಲ್ಲದೆ, ರಸ್ತೆ
ಬದಿಯಲ್ಲಿದ್ದ ಗಿಡಗಂಟಿಗಳನ್ನು ತೆರವು ಮಾಡಿದ್ದಾರೆ.
ಜೂ 20ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅವರು ಈ ಸೇವಾ ಕಾರ್ಯ ಮಾಡಿದ್ದಾರೆ. ಲಾಕ್ ಡೌನ್ ಸಮಯವನ್ನು
ಸದುಪಯೋಗ ಮಾಡಿಕೊಂಡು ಶ್ರಮದಾನದ ಮೂಲಕ ಸಮಾಜಸೇವೆ ಮಾಡಿರುವ ಗೋಪಾಲರವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.