ಪುತ್ತೂರು : ಭಕ್ತಕೋಡಿಯಲ್ಲಿನ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ಡೆಂಗ್ಯೂ ತಪಾಸಣಾ ಉಪಕರಣ ದೊರಕಿದ್ದು, ಕೇಂದ್ರದ ವಿದ್ಯುತ್ ವಯರಿಂಗ್ ನ ತಾಂತ್ರಿಕ ತೊಂದರೆಯಿಂದಾಗಿ ಯಂತ್ರದ ಕೆಲಸ ಕಾರ್ಯ ಕಷ್ಟಸಾಧ್ಯ ವಾಗಿತ್ತು ಈ ಬಗ್ಗೆ ವೈದ್ಯಾಧಿಕಾರಿಗಳ ಕೋರಿಕೆ ಮೇಲೆ ಶ್ರೀರಾಮ ಗೆಳೆಯರ ಬಳಗದ ಕೋವಿಡ್ ಸಹಾಯವಾಣಿ ಸದಸ್ಯರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯುತ್ ಸಂಚಾರಕ್ಕೆ ಸಮಸ್ಯೆ ಯಾಗಿರುವ ಅರ್ಥ್ ಗುಂಡಿ ಹಾಗೂ ಪೈಪ್ ಮತ್ತು ವೈರಿಂಗ್ ಕೆಲಸ ನಿರ್ವಹಿಸಿ ಸಮಸ್ಯೆಯನ್ನು ಪರಿಹರಿಸಿ ಕೊಟ್ಟಿದ್ದಾರೆ.
ಈ ಕೆಲಸದಲ್ಲಿ ಕೋವಿಡ್ ಸಹಾಯವಾಣಿಯ ವಿದ್ಯುತ್ ಕಾಂಟ್ರಾಕ್ಟರ್ ಬಾಲಚಂದ್ರ ಕಡ್ಯ, ಅಶೋಕ್ ಪುತ್ತಿಲ,ಧನಂಜಯ ಕಲ್ಲಮ, ಪ್ರಸಾದ್ ಬಿಕೆ, ಹರೀಶ್ ನಾಯ್ಕ್ ಕಾರ್ಯ ನಿರ್ವಹಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.