ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಲಾಕ್ ಡೌನ್ ಬಗೆಗಿನ ಮಾಹಿತಿ ನೀಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು, ದ. ಕ ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಗಳ ವ್ಯವಸ್ಥೆಗಳನ್ನು ಹೆಚ್ಚು ಮಾಡುತ್ತಿದ್ದು,ಮೊನ್ನೆಯ ಕೊರೊನಾ ವರದಿ ಪ್ರಕಾರ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 7.5% ಪಾಸಿಟಿವಿಟಿ ರೇಟ್ ಇದೆ. ನಿನ್ನೆಯ ವರದಿ ಪ್ರಕಾರ 10,460 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 5.5% ಪಾಸಿಟಿವಿಟಿ ರೇಟ್ ಇದೆ. ಈ ಕಾರಣದಿಂದಾಗಿ ಇನ್ನೂ ಕೆಲ ದಿನಗಳ ಕಾಲ ಬಹಳ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ನಿಯಂತ್ರಣ ಮಾಡುವ ಅನಿವಾರ್ಯತೆ ಇದೆ ಎಂದರು.
ಅನೇಕ ಜನರ ಮನಸ್ಸಿನಲ್ಲಿ ಲಾಕ್ ಡೌನ್ ಮುಂದುವರೆಸಿದರೆ ಕಷ್ಟ-ಕಾರ್ಪಣ್ಯಗಳಿವೆ, ತಿರುಗಾಡಲು ಬೇರೆ ವಾಹನಗಳಿಲ್ಲ, ಬಟ್ಟೆ ಮಳಿಗೆಗಳನ್ನು ತೆರೆಯಲು ಅವಕಾಶ ಕೊಡಬೇಕು. ಹೀಗೆ ಬೇರೆ ಬೇರೆ ಕಾರಣಗಳನ್ನು ನೀಡುತ್ತಿದ್ದು, ಆದರೆ ಅನಿವಾರ್ಯತೆಗಳನ್ನು ಕೂಡ ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಇನ್ನೂ 5,6 ದಿನಗಳಲ್ಲಿ 5,6 ದಿನಗಳಲ್ಲಿ ಪಾಸಿಟಿವಿಟಿ ರೇಟ್ 3%,4% ಗೆ ಇಳಿಕೆಯಾದರೇ, ನಮಗೆ ಲಾಕ್ ಡೌನ್ ಸಡಿಲ ಮಾಡುವ ವ್ಯವಸ್ಥೆ ಇರುತ್ತದೆ. ಎರಡೇ ದಿವಸದಲ್ಲಿ ಸಡಿಲಿಕೆ ಮಾಡಿದ್ರೆ ಮತ್ತೆ 7,8% ಗೆ ಏರಿಕೆಯಾದರೇ ಮತ್ತೆ ಲಾಕ್ ಡೌನ್ ಅನಿವಾರ್ಯತೆ ಎದುರಾಗಬಹುದು. ಆದ್ದರಿಂದ ಸಾರ್ವಜನಿಕರಿಗೆ ಅಗತ್ಯ ಸಾಮಾಗ್ರಿ ಖರೀದಿಗೆ ಬೆ. 7ರಿಂದ ಮ.1ರವರೆಗೆ ಅವಕಾಶ ನೀಡುತ್ತಿದ್ದು, ಪ್ರತೀ ದಿನ ರಾತ್ರಿ 7 ರಿಂದ ಬೆ. 7ರವರೆಗೆ ನೈಟ್ ಕರ್ಪೂ ಜಾರಿಯಲ್ಲಿರುತ್ತದೆ.
ಶುಕ್ರವಾರ 7 ರಿಂದ ಸೋಮವಾರ 7ರವರೆಗೆ ವಾರಾಂತ್ಯ ಕರ್ಫ್ಯೂ ಇರುತ್ತದೆ. ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇರುವುದಿಲ್ಲ.ಕಟ್ಟಡ ಕಾರ್ಮಿಕರಿಗೆ, ರಿಕ್ಷಾ ಚಾಲಕರಿಗೆ ಅವಕಾಶ ಕಲ್ಪಿಸಲಾಗಿದೆ ಹಾಗೇ ಉತ್ಪಾದನಾ ಘಟಕಗಳಿಗೆ, ಕೈಗಾರಿಕಾ ಘಟಕಗಳಿಗೆ ಬೇಕಾದ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದ್ದು, ಕೃಷಿ ಮತ್ತು ಮೀನುಗಾರಿಕೆಗೆ ಕೂಡ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ವಿನಾಕಾರಣ ತಿರುಗಾಟ ಮಾಡದೇ, ಕೊರೊನಾ ನಿಯಂತ್ರಣ ಮಾಡಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದರು.