ಪುತ್ತೂರು : ಪುತ್ತೂರು ನಗರಸಭೆಯ 16 ನೇ ವಾರ್ಡ್ ನ ಕಾರ್ಜಾಲು ಮತ್ತು ಪೆರಿಯತೋಡಿ ಸಂಪರ್ಕ ರಸ್ತೆಯ ಮಧ್ಯ ಹರಿಯುವ ಹಳ್ಳಕ್ಕೆ ಮಳೆಯಿಂದಾಗಿ ಬೃಹತ್ ಬಂಡೆ ಮತ್ತು ಮಣ್ಣು ಕುಸಿದ ಕಾರಣ ಹಳ್ಳದ ನೀರಿಗೆ ಹರಿವು ಇಲ್ಲದೇ ಹಳ್ಳದ ನೀರು ಕೃಷಿ ಭೂಮಿಗೆ ನುಗ್ಗಿ ಕೃಷಿ ಹಾನಿಯಾಗುತ್ತಿದೆ ಮತ್ತು ಇದರಿಂದ ನೂತನವಾಗಿ ನಿರ್ಮಾಣವಾದ ರಸ್ತೆಗೂ ಹಾನಿಯಾಗುವ ಸಂಭವವಿದೆ ಎಂದು ವಿಕ್ಟರ್ ಪಾಯಸ್ ಮತ್ತು ತಂಡ ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು.
ತಕ್ಷಣವೇ ಮನವಿಗೆ ಸ್ಪಂದಿಸಿದ ನಗರ ಸಭೆ ಪೌರಯುಕ್ತರಾದ ಮಧು ರವರು ಸಮಸ್ಯೆಯನ್ನು ಬಗೆಹರಿಸಿ ಕೃಷಿ ಭೂಮಿಗೆ ಮತ್ತು ನೂತನವಾಗಿ ನಿರ್ಮಾಣವಾದ ರಸ್ತೆಗೆ ಯಾವುದೇ ತೊಂದರೆಯಾಗದಂತೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮಣ್ಣು ಮತ್ತು ಬಂಡೆಯನ್ನು ತೆರವುಗೊಳಿಸಿದರು.