ಕೊಕ್ಕಡ : ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಹಳ್ಳಿಂಗೇರಿ ವಲಯ ಕಚೇರಿಯ ಸುತ್ತ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡವು ವಿ. ನಿ. ಘಟಕದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಹಳ್ಳಿಂಗೇರಿ ವಲಯ ಕಚೇರಿಯ ಸುತ್ತ ಸುಮಾರು 30-35 ತೆಂಗಿನ ಹಾಗೂ ಇತರ ವಾಣಿಜ್ಯ ಗಿಡಗಳನ್ನು ನೆಟ್ಟರು. ಧರ್ಮಸ್ಥಳದ ಯೋಜನಾಧಿಕಾರಿ ಜಯಕರ ರವರು ಕಲ್ಪವೃಕ್ಷವನ್ನು ನೆಟ್ಟು ತಂಡಕ್ಕೆ ಶುಭ ಹಾರೈಸಿದರು.
ಮೇಲ್ವಿಚಾರಕರಾದ ಮಮತಾ ಜತೆಗಿದ್ದು ಮಾರ್ಗದರ್ಶನ ನೀಡಿದರು. ವಲಯದ ಸೇವಾಪ್ರತಿನಿಧಿಗಳಾದ ಲಲಿತಾ, ಅರುಣಾ, ಯಮುನಾ, ರೂಪ ಹರಿಣಿ, ಅನಿತಾ, ಕುಸುಮ,ಸಂಧ್ಯಾ, ಸೌಮ್ಯ ಕೊಕ್ಕಡದ ಸ್ವಚ್ಛತಾ ಸೇನಾನಿ ಪ್ರತಿಮಾ ಸಹಕರಿಸಿದರು.
ಸೇವಾಪ್ರತಿನಿಧಿ ಯೋಗೀಶ್ ಶಿಬಾಜೆ ಗಿಡಗಳನ್ನು ತರುವ ಕಾರ್ಯ ನಡೆಸಿಕೊಟ್ಟರು . ಜನಜಾಗೃತಿ ವಲಯ ಅಧ್ಯಕ್ಷ ರಾದ ಮೋಹನ್ ಗೌಡ, ಕುಶಾಲಪ್ಪ, ಸೇಸಪ್ಪ, ರಾಮಣ್ಣ , ಒಕ್ಕೂಟದ ಅಧಕ್ಷರುಗಳಾದ ವನಜಾಕ್ಷಿ ಮತ್ತು ಹೆರಾಲ್ಡ್ ಪ್ರಕಾಶ್, ಸ್ಥಳೀಯರು ಪಾಲ್ಗೊಂಡಿದ್ದರು. ವಿ. ನಿ. ಘಟಕದ ಸ್ವಯಂ ಸೇವಕರಾದ ಶೀನಪ್ಪ ಶಿಶಿಲ, ಜಗದೀಶ್ ಶಿಶಿಲ, ನಾರಾಯಣ ಗೌಡ, ಪ್ರಕಾಶ್ ರೆಖ್ಯ, ಗುರುಪ್ರಸಾದ್. ಎಮ್ , ಗುರುಪ್ರಸಾದ್,, ಗಂಗಾಧರ್ ಶಿಶಿಲ, ತನಿಯ ಶಿಶಿಲ, ಉಮೇಶ್ ಶಿಶಿಲ,ರಮೇಶ್ ಭೈರಕಟ್ಟಾ, ಮೋಹನ್ ಕೊಕ್ಕಡ, ಪ್ರವೀಣ್ ಪತ್ತಿಮಾರ್ ಸೇವ ಕಾರ್ಯವನ್ನು ನಡೆಸಿದರು. ವಿದ್ಯುತ್ ತಂತಿಗೆ ತಾಗಿಕೊಂಡಿದ್ದ ದೊಡ್ಡ ಮರ ತೆರವು ಕಾರ್ಯಚರಣೆ ಮತ್ತು ಕಚೇರಿಯ ಸುತ್ತಲೂ ಆವರಣದಲ್ಲಿ ತಂತಿ ಬೇಲಿಯನ್ನು ರಚಿಸಿ ಕೊಡುವ ಕಾರ್ಯವನ್ನು ನಡೆಸಿದರು.