ಪುತ್ತೂರು ನಗರಸಭೆ ಹಾಗೂ ಸಾಹಸ ಸಂಸ್ಥೆ ಬೆಂಗಳೂರು ಇವರ ಸಹಯೋಗದೊಂದಿಗೆ, HDB ಫೈನಾನ್ಷಿಯಲ್ ಸರ್ವೀಸ್ ಅವರ ಆರ್ಥಿಕ ನೆರವಿನೊಂದಿಗೆ ದಿನಾಂಕ 09/12/2025 ರಂದು ಮುರಾರ್ಜಿ ದೇಸಾಯಿ ವಸತಿ ಶಾಲೆ, ಬಲ್ನಾಡು ಇಲ್ಲಿ ಸಮಗ್ರ ಘನತ್ಯಾಜ್ಯ ವಿಲೇವಾರಿ, ನಿರ್ವಹಣೆ ಹಾಗೂ ಬೀದಿ ನಾಯಿಗಳ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಪುತ್ತೂರು ನಗರಸಭೆಯ ಮಾನ್ಯ ಪೌರಾಯುಕ್ತರಾದ ಶ್ರೀಮತಿ ವಿದ್ಯಾ ಕಾಳೆ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಘನತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸುವುದು, ವಿಲೇವಾರಿ ಮಾಡುವ ವಿಧಾನಗಳು ಹಾಗೂ ಬೀದಿ ನಾಯಿಗಳ ಬಗ್ಗೆ ಮಾನವೀಯ ದೃಷ್ಟಿಕೋನ ಮತ್ತು ಜವಾಬ್ದಾರಿಯುತ ವರ್ತನೆಯ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಶ್ವೇತಾಕಿರಣ, ಪ್ರಾಣಿ ದಯಾಸಂಘದ ಸದಸ್ಯರಾದ ಶ್ರೀಮತಿ ಮಮತಾರಾವ್, ಪುತ್ತೂರು ನಗರಸಭೆಯ ಸಮುದಾಯ ಪ್ರೇರೇಪಕರು, ಸಾಹಸ ಸಂಸ್ಥೆಯ ಯೋಜನಾ ಸಂಯೋಜಕರಾದ ಶ್ರೀ ಅನಂತ ದೇಶಭಂಡಾರಿ, ಮೇಲ್ವಿಚಾರಕರಾದ ಶ್ರೀ ಗಣೇಶ ಹಾಗೂ ಶ್ರೀ ಸಿದ್ದಪ್ಪ ವಡೇರ್ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಹಾಗೂ ಮಾಹಿತಿಯನ್ನು ಹಂಚಿಕೊಂಡರು.
ಈ ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟರು.

























