ವಿಟ್ಲ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘದ ವಿಟ್ಲ ವಲಯದ ವತಿಯಿಂದ ಸೋಮವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕಾದಿ ವಿಶೇಷ ಪೂಜಾ ಸೇವೆಯೊಂದಿಗೆ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ, ಜಯರಾಮ ಬಲ್ಲಾಳ, ಸಂಘದ ಅಧ್ಯಕ್ಷ ಲೀಯೋ ಡಿ ಲಸ್ರಾದೋ, ಗೌರವಾಧ್ಯಕ್ಷ ಬಿ.ಕೆ. ಬಾಬು, ಕಾರ್ಯದರ್ಶಿ ಅರುಣ ಕಾಪುಮಜಲು, ಕೋಶಾಧಿಕಾರಿ ಪುರುಷೋತ್ತಮ, ಸಂಚಾಲಕ ಉಮರ್, ಗೌರವ ಸಲಹೆಗಾರ ಸುಂದರ ಆಚಾರ್ಯ ನೆಗಳಗುಳಿ, ಹರೀಶ್ ಆಚಾರ್ಯ ಚಂದಳಿಗೆ, ಲೆಕ್ಕ ಪರಿಶೋಧಕ ಪಡಾರು ಚಂದ್ರಶೇಖರ ಭಟ್ ಸೇರಿದಂತೆ ವಿಟ್ಲ ಪರಿಸರದ ಅನೇಕ ಗ್ಯಾರೇಜ್ ಮಾಲಕರು ಹಾಗೂ ನೌಕರ ವೃಂದದವರು ಭಾಗವಹಿಸಿದ್ದರು.
ಧಾರ್ಮಿಕ ಕಾರ್ಯಕ್ರಮದ ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 1,700ಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮವು ಶಾಂತಿ, ಸೌಹಾರ್ದ ಹಾಗೂ ಭಕ್ತಿಭಾವದ ವಾತಾವರಣದಲ್ಲಿ ಸಂಪನ್ನಗೊಂಡಿತು.


























