ಕಡಬ: ಇಲ್ಲಿನ ಎಟಿಎಂ ಕೇಂದ್ರದಲ್ಲಿ ಬಾಕಿಯಾಗಿದ್ದ ಮಹಿಳೆಯೊಬ್ಬರ ಮೊಬೈಲನ್ನು ಹೆಲ್ಮೆಟ್ ಧರಿಸಿದ ಯುವಕನೊಬ್ಬ ಎಗರಿಸಿದ ಘಟನೆ ಜೂನ್.೨೫ ರಂದು ಮುಂಜಾನೆ ನಡೆದಿದೆ.
ಕಡಬ ಠಾಣೆ ಸಮೀಪದ ಬ್ಯಾಂಕ್ ಆಫ್ ಬರೋಡ ದ ಎಟಿಎಂ ಕೇಂದ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಇಡಾಳದ ರೇಖಾ ಎಂಬವರು ಹಣ ಪಡೆಯಲು ಬಂದಿದ್ದರು.ಈ ಸಂದರ್ಭ ಹಣ ಬಾರದ ಹಿನ್ನೆಲೆಯಲ್ಲಿ ಮೊಬೈಲನ್ನು ಅಲ್ಲೆ ಬಿಟ್ಟು ಸಿಬ್ಬಂದಿಯನ್ನು ಕರೆಯಲು ಬ್ಯಾಂಕಿಗೆ ಹೋಗಿದ್ದರು. ಹಿಂತಿರುಗಿ ಬಂದು ನೋಡಿದಾಗ ಮೊಬೈಲ್ ಇಲ್ಲದಿರುವುದು ಗಮನಕ್ಕೆ ಬಂದಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಮಹಿಳೆಯು ಸಿಬ್ಬಂದಿಯನ್ನು ಕರೆಯಲು ಹೋದ ವೇಳೆ ಎಟಿಎಂ ಕೇಂದ್ರ ಬಳಿ ಸ್ಕೂಟಿಯಲ್ಲಿ ಬಂದ ಯುವಕನೊಬ್ಬ ಹೆಲ್ಮೆಟ್ ಧರಿಸಿಯೇ ಒಳಪ್ರವೇಶಿಸಿ ಹಣ ಪಡೆದಿದ್ದ. ಜೊತೆಗೆ ಪಕ್ಕದಲ್ಲಿ ಇರಿಸಿದ್ದ ಮೊಬೈಲನ್ನು ಎಗಸಿರಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಕಳೆದು ಹೋಗಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ .ಹೆಲ್ಮೆಟ್ ಧರಿಸಿದ ಯುವಕನ ಪತ್ತೆಗೆ ಕಡಬ ಪೊಲೀಸರು ಬಲೆ ಬೀಸಿದ್ದಾರೆ.