ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ನಗರಸಭೆ ಸಹಯೋಗದಲ್ಲಿ ಪುತ್ತೂರಿನ ಪ್ರತಿ “ಮನೆಗೊಂದು ಬಿಲ್ವ” ಎಂಬ ಪರಿಕಲ್ಪನೆಯಡಿಯಲ್ಲಿ ಬಿಲ್ವ ಪತ್ರೆ ಗಿಡಗಳನ್ನು ಜೂ.28 ರಂದು ವಿತರಣೆ ಮಾಡಲಾಗುತ್ತಿದೆ.
ಬಿಲ್ವ ಪತ್ರೆ ಗಿಡಗಳನ್ನು ಪ್ರತಿ ವಾರ್ಡ್ ಗಳಿಗೂ ವಿತರಣೆ ಮಾಡಲಾಗುತ್ತಿದ್ದು, ಎಲ್ಲರೂ ತಮ್ಮ ವಾರ್ಡ್ ಗಳಲ್ಲಿ ಗಿಡಗಳನ್ನು ಪಡೆದುಕೊಳ್ಳಬೇಕು.ವಾರ್ಡ್ ಕೌನ್ಸಿಲರ್ ರಿಂದ ಪ್ರತಿ ವಾರ್ಡ್ ಗಳಲ್ಲಿಯೂ ವಿತರಣೆ ಮಾಡಲಾಗುತ್ತದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.