ಪುತ್ತೂರು: ಮಾದಕ ವಸ್ತು ಎಂಡಿಎಮ್‌ಎ ನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಕುರಿತು ಪುತ್ತೂರು ಸಂಪ್ಯ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಮೇ15ಕ್ಕೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ ಇಸ್ಮಾಯಿಲ್ (30.)ಎಂಬವರು ಬಂಧಿತ ಆರೋಪಿ.
ಪುತ್ತೂರು ಗ್ರಾಮಾಂತರ ಪೊಲೀಸರು ಆರ್ಯಾಪು ಸಂಟ್ಯಾರ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟಾಟಾ ನ್ಯಾನೋ ಕಾರನ್ನು ಪರಿಶೀಲಿಸಿದಾಗ ಕಾರಿನ ಚಾಲಕ ಇಸ್ಮಾಯಿಲ್ ಅವರು ಮಾತನಾಡಲು ತಡವರಿಸುತ್ತಿದ್ದು, ಸಂಶಯಗೊಂಡ ಪೊಲೀಸರು ವಿಚಾರಿಸಿದಾಗ ಮಾದಕವಸ್ತು ಎಂಡಿಎಂ ಸೇವಿಸಿದ್ದಲ್ಲದೆ ಮಾರಾಟ ಮಾಡಲೆಂದು ಕಾರಿನಲ್ಲಿ ಇಟ್ಟಿದ್ದ 2 ಗ್ರಾಂ ಎಂಡಿಎಂನ್ನು ಸ್ವಾಧೀನ ಪಡಿಸಿದ್ದಾರೆ.
ನಿಷೇಧಿತ ಮಾದಕ ವಸ್ತುವಾದ ಎಂಡಿಎಂನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


























