ಪುತ್ತೂರು : ಪಾಲ್ತಾಡು ಗ್ರಾಮದ ಕಮಲ ಎಂಬ ಮಹಿಳೆಯು ಕೋವಿಡ್ ನಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜೂ.28 ರಂದು ನಿಧನರಾದರು.
ಅವರ ಮೃತ ದೇಹವನ್ನು ಹಿಂದೂ ಜಾಗರಣ ವೇದಿಕೆಯ ಆಂಬ್ಯುಲೆನ್ಸ್ ಮೂಲಕ ಇಡ್ಕಿಡು ಹಿಂದೂ ರುದ್ರ ಭೂಮಿಗೆ ತಂದು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಸಂಪ್ಯ ಹೆಡ್ ಕಾನ್ಸ್ಟೇಬಲ್ ಹಾಗೂ ಮುಖ್ಯ ಮಂತ್ರಿ ಪದಕ ವಿಜೇತರಾದ ಪ್ರವೀಣ್ ರೈ ಪಾಲ್ತಾಡು ರವರು ಪಿಪಿಇ ಕಿಟ್ ಧರಿಸಿ ಮೃತ ಮಹಿಳೆಯ ಮಗನ ಜೊತೆ ಸೇರಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಕೊರೊನಾದಿಂದಾಗಿ ಮರಣ ಹೊಂದಿದರೆ ಕುಟುಂಬದವರೇ ದೂರ ಸರಿಯುವ ಈ ಸಂದರ್ಭದಲ್ಲಿ ಪ್ರವೀಣ್ ರವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮೃತರು ಗಂಡ ಅಂಬೋಡಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶ್ರೀ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಗುರು ಪ್ರೇಮ್ ಗಳಿಯಾಲ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಪಲ್ತಾಡಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಿಟ್ಟಣ್ಣ ರೈ ಪಲ್ತಾಡಿ, ಗ್ರಾಮ ಪಂಚಾಯತ್ ಸದಸ್ಯರಾದಂತಹ ತಾರಾನಾಥ್, ಹರೀಶ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜಯರಾಮ್ ರೈ ಬರೆಮನೆ, ಊರಿನ ಗಣ್ಯರಾದ ಜಯರಾಮ್ ಗೌಡ ದೊಡ್ಡ ಮನೆ, ಹರೀಶ್ ರೈ ನಡುಕುಟೇಲು ಇನ್ನಿತರರು ಉಪಸ್ಥಿತರಿದ್ದರು.