ಪುತ್ತೂರು: ಬೈಕ್ ಸ್ಕಿಡ್ ಆಗಿ ಬಿದ್ದು ಯುವಕನಿಗೆ ಗಾಯವಾದ ಘಟನೆ ಕಾವೇರಿಕಟ್ಟೆ ಬಳಿ ನಡೆದಿದೆ.
ದರ್ಬೆ ಇಂದ ಕೂರ್ನಡ್ಕ ಕಡೆ ಹೋಗುತ್ತಿದ್ದ ಬೈಕ್ ಕಾವೇರಿಕಟ್ಟೆ ಬಳಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಾಯಗಳಾಗಿತ್ತು. ಕೂಡಲೇ ಸಾರ್ವಜನಿಕರು ಆತನನ್ನು ಆಟೋ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

























