ಕಡಬ: ಕಡಬ ತಾಲೂಕು ರಾಮಕುಂಜ ಗ್ರಾಮದ ಆತೂರು ಜಂಕ್ಷನ್ ನ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಟೆಂಪೋ ಡಿಕ್ಕಿ ಹೊಡೆದು ಸವಾರ ಹ್ಯಾರಿಸ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೂ.29 ರಂದು ಮಧ್ಯಾಹ್ನ ನಡೆದಿದೆ.
ಟಾಟಾ ಎಸ್ ಟೆಂಪೊ ವಾಹನದ ಚಾಲಕ ಮಹಮ್ಮದ್ ಶರೀಫ್ ರವರ ಅತಿವೇಗ ಹಾಗೂ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂದು ಅಬೂಬಕ್ಕರ್ ಸಿದ್ಧಿಕ್ ರವರು ದೂರು ನೀಡಿದ್ದಾರೆ.
ಅಬೂಬಕ್ಕರ್ ಸಿದ್ದಿಕ್ ರವರು ಆಟೋ ರಿಕ್ಷಾ ವಾಹನದಲ್ಲಿ ಬಾಡಿಗೆಗಾಗಿ ಕೊಯಿಲಾ ಗ್ರಾಮದಿಂದ ಗೋಳಿತ್ತಡಿ ಎಂಬಲ್ಲಿಗೆ ಕಡಬ ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ರಾಮಕುಂಜ ಗ್ರಾಮದ ಆತೂರು ಮುಖ್ಯ ಜಂಕ್ಷನ್ ಬಳಿ ತಲುಪಿದಾಗ ಆತೂರು ಮುಖ್ಯ ಜಂಕ್ಷನ್ ಬಳಿ ಕಡಬ ಪೊಲೀಸರು ಚೆಕ್ ಪೋಸ್ಟ್ ಹಾಕಿದ ತಾತ್ಕಾಲಿಕ ಶೆಡ್ ಕಡೆಯಿಂದ ಆತೂರು ಜಂಕ್ಷನ್‌ನಲ್ಲಿರುವ ಅಂಚೆ ಕಚೇರಿ ಕಡೆಗೆ ವ್ಯಕ್ತಿಯೊಬ್ಬನು ರಸ್ತೆ ದಾಟಿ ರಸ್ತೆಯ ಅಂಚಿಗೆ ತಲುಪುವಷ್ಟರಲ್ಲಿ ಕೊಯಿಲಾ ಕಡೆಯಿಂದ ಟಾಟಾ ಏಸ್ ಟೆಂಪೋ ವಾಹನದ ಚಾಲಕನಾದ ಮಹಮ್ಮದ್ ಶರೀಫ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತೂರು ಚೆಕ್ ಪೋಸ್ಟ್ ದಾಟಿ ಮುಂದೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ರಸ್ತೆ ದಾಟುತಿದ್ದ ವ್ಯಕ್ತಿ ಡಾಮಾರು ರಸ್ತೆಗೆ ಬಿದ್ದಿದ್ದು ನಂತರ ಗಾಯಗೊಂಡವನನ್ನು ಸ್ಥಳದಲ್ಲಿ ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ಪೊಲೀಸರು ಇಲಾಖಾ ಜೀಪಿನಲ್ಲಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ ವೈದ್ಯರು ಗಾಯಾಳು ಹ್ಯಾರೀಸ್ ಎಂಬಾತನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತಾಗಿ ಅಬೂಬಕ್ಕರ್ ಸಿದ್ಧಿಕ್ ರವರು ನೀಡಿದ ದೂರಿನ ಮೇರೆಗೆ ಆರೋಪಿ ಮಹಮ್ಮದ್ ಶರೀಫ್ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತವಾದ ಸುದ್ದಿ ಕೇಳಿ ಚೆಕ್‌ಪೋಸ್ಟ್ ಬಳಿ ಬಂದ ಸಾರ್ವಜನಿಕರ ಪೈಕಿ ಸುಮಾರು 50-60 ಮಂದಿ ಸೇರಿದ್ದು, ಅವರ ಪೈಕಿ ಸುಮಾರು 10-15 ಜನ ಯಾರೋ ಕಿಡಿಗೇಡಿಗಳು ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳನ್ನು ಚೆಕ್ ಮಾಡಿದರೇ ನಮಗೆ ಬಾರಿ ತೊಂದರೆ ಆಗುತ್ತದೆ ಅದಕ್ಕೆ ಇಲ್ಲಿ ಚೆಕ್‌ಪೋಸ್ಟ್ ಬೇಡ ಎಂದು ಹೇಳಿ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್‌ನ್ನು ಎಳೆದು ಹಾಕಿ ನಂತರ ವಾಗ್ವಾದ ಮಾಡಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ ಮಾಡಿದ್ದು, ಈ ಬಗ್ಗೆ ಕೂಡ ಪ್ರಕರಣ ದಾಖಲಾಗಿದೆ.