ನಾಡು ಕಂಡ ಭೂಗತ ಲೋಕದ ದೊರೆ ಮುತ್ತಪ್ಪ ರೈ.. ಕೆಲ ಸಮಯಗಳ ಹಿಂದೆಯಷ್ಟೇ ಜೀವನದ ದಾರಿಗೆ ವಿದಾಯ ಪಡೆದ ಮುತ್ತಪ್ಪ ರೈ ಅವರ ಕಾರ್ಯವೈಖರಿ ಇವತ್ತಿಗೂ ಜನಮಾನಸದಲ್ಲಿ ಉಳಿದುಬಿಟ್ಟಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮುತ್ತಪ್ಪ ರೈ ಜೀವನದ ನೈಜ ಕಥೆಯಾಧಾರಿತ ಎಂ ಆರ್ ಚಿತ್ರವೂ ತನ್ನ ಚಿತ್ರೀಕರಣ ಕಾರ್ಯವನ್ನು ಭರ್ಜರಿಯಾಗಿ ಆರಂಭಿಸಿಕೊಂಡಿದೆ.
ಚಿತ್ರೀಕರಣಕ್ಕೂ ಮುನ್ನ ಸ್ಯಾಂಡಲ್ ವುಡ್ ಗೊಂದು ಹೊಸ ವಿಭಿನ್ನ ಕಥೆಯನ್ನು ಹೆಣೆದು, ಅರ್ಪಿಸಲಾಗುತ್ತಿರುವ ಈ ರಿಯಲ್ ಲೈಫ್ ಸ್ಟೋರಿ ಚಿತ್ರದ ಶೂಟಿಂಗ್ ಸಂಕಲ್ಪವು ಡಿ. 4ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಗಿದೆ. ಸಾಮಾಜಿಕವಾಗಿ ಧಾರ್ಮಿಕವಾಗಿಯೂ ಗುರುತಿಸಿಕೊಂಡಿದ್ದ ಮುತ್ತಪ್ಪ ರೈ ಜೀವನದ ಸತ್ಯಾನುಸತ್ಯತೆಗಳನ್ನು ಬಂಧು ಬಳಗದವರ ನೆರವಿನಿಂದ ತಿಳಿದುಕೊಂಡಿರುವ ಚಿತ್ರತಂಡವು, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಮುತ್ತಪ್ಪ ರೈ ನೀಡಿರುವ ಕೋಟಿ ವೆಚ್ಚದ ಬ್ರಹ್ಮರಥದ ಕುರಿತಾಗಿಯೂ ಚಿತ್ರದಲ್ಲಿ ತುಣುಕುಗಳನ್ನು ಬಿತ್ತರಿಸಿದ್ದು, ಇದೀಗ ಚಿತ್ರದ ನಿರ್ದೇಶಕರು ಹಾಗೂ ತಂಡದವರು ಡಿ. 4ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿ ಈ ಶತರುದ್ರಾಭಿಷೇಕ ಸೇವೆಯನ್ನೂ ದೇವಳದಲ್ಲಿ ನಡೆಸುವ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ.