ಮಂಗಳೂರು ನಗರದ ಹೃದಯಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಉಲ್ಲೇಖಿಸಿ ಉಗ್ರವಾದದಿಂದ ಕೂಡಿದ ಗೋಡೆ ಬರಹದ ಹಿಂದಿರುವ ಕಿಲಾಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ಗೋಡೆ ಬರಹದ ಹಿಂದಿರುವ ವ್ಯಕ್ತಿ ಇದೇ ರಾಜ್ಯದ ನಿವಾಸಿ ಎಂದು ಪೊಲೀಸರು ದೃಢಪಡಿಸಿದ್ದಾರೆ.ವಿಶೇಷ ತಂಡದ ನೇತೃತ್ವದಲ್ಲಿ ಕದ್ರಿ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.ಆರೋಪಿ ಶಿವಮೊಗ್ಗ ನಿವಾಸಿ ಮಹಮ್ಮದ್ ನಜೀರ್ ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕಾಗಿ ಈತ ಈ ರೀತಿಯ ಕೃತ್ಯ ನಡೆಸಿದ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.