ಪುತ್ತೂರು – ಮಂಗಳೂರು ರಸ್ತೆಯಲ್ಲಿ ಚಲಿಸುತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಅನತಿ ದೂರವಿದ್ದ ವಿದ್ಯುತ್ ಟ್ರಾನ್ಸ್ ಫಾರಂರ್ ಗೆ ಗುದ್ದಿ ಮಗುಚಿ ಬಿದ್ದ ಘಟನೆ ಕಬಕ ಗ್ರಾಮ ದ ಪೋಳ್ಯ ದಲ್ಲಿ ಇಂದು ಮಧ್ಯ ರಾತ್ರಿ ವರದಿಯಾಗಿದೆ.
ಟ್ರಾನ್ಸ್ ಫಾರ್ಮರ್ ಸಹಿತ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಸಮೀಪ ದಲ್ಲಿದ್ದ ಸಾರ್ವಜನಿಕ ಕುಡಿಯುವ ನೀರು ಸರಬರಾಜು ಬೋರ್ವೆಲ್ ಕೂಡ ಹಾನಿಯಾಗಿದೆ.ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ, ವಿದ್ಯುತ್ ಸಂಪರ್ಕ ತನ್ನಿಂದ ತಾನೇ ಕಡಿದು ಕೊಂಡು ಸಂಭಾವಿಸಬಹುದಾದ ಭಾರಿ ಅನಾಹುತ ತಪ್ಪಿ ಹೋಗಿದೆ, ಮೆಸ್ಕಾಂ ಗೆ ಲಕ್ಷಾಂತರ ರೂಪಾಯಿ ನಷ್ಟಸಂಭವಿಸುವ ಸಾಧ್ಯತೆ ಇದೆ.