ಬ್ಯಾಂಕ್ ಟು ಭೂಗತ ಲೋಕದವರೆಗೆ ಹವಾ ಕ್ರಿಯೇಟ್ ಮಾಡಿದ್ದ ಮಾಜಿ ಭೂಗತ ಲೋಕದ ದೊರೆ, ಸಮಾಜ ಸೇವಕ, ಧಾರ್ಮಿಕ ಸೇವಾಕರ್ತ ಮುತ್ತಪ್ಪ ರೈ ಚಿತ್ರ ಸೆಟ್ಟೇರಲು ಭರ್ಜರಿ ತಯಾರಿಗಳೇ ನಡೆಯುತ್ತಿದೆ. ರೈ ಜೀವನದ ಅಸಲಿ ಕಹಾನಿಯನ್ನು ಹೊತ್ತುಕೊಂಡು ಎಂ ಆರ್ ಚಿತ್ರತಂಡ ಮುಂದೆ ಬರುತ್ತಿದೆ. ಚಿತ್ರದ ಶೂಟಿಂಗ್ ಆರಂಭವಾಗಿಲ್ಲ. ಆರಂಭಕ್ಕೂ ಮುನ್ನ ಈ ಸಿನಿಮಾದ ಪೋಸ್ಟರ್ ಲುಕ್ ಅಂತೂ ಪಕ್ಕಾ ವೈರಲ್ ಆಗೋದ್ರಲ್ಲಿ ನೋ ಡೌಟ್.

ಎಂ ಆರ್ ಚಿತ್ರದ ಪೋಸ್ಟರ್ ಲುಕ್ ಬಿಡುಗಡೆಗೊಂಡಿದ್ದು, ಕನ್ನಡ ಇಂಡಸ್ಟಿç ಇತಿಹಾಸದಲ್ಲೇ ಇದು ಪ್ರಥಮ ಅಂತಾರೆ ಚಿತ್ರದ ನಿರ್ದೇಶಕರು. ಈ* ಹಿಂದೆ ಇಂಥದ್ದೊAದು ಲುಕ್ ಯಾರೂ ಮಾಡಿಯೇ ಇಲ್ವಂತೆ. …೭೨ ದಿನಗಳ ಕಾಲ ಇದರ ಅನುಮತಿಗಾಗಿಯೇ ಕಾಯಲಾಗಿತ್ತು. ಶಿಲಾಂದ್ರ ಅನ್ನುವ ಸ್ಥಳದಲ್ಲಿ ಶೂಟ್ ನಡೆಯುತ್ತೆ.


ಚಿತ್ರದ ನಾಯಕನಟ ಹೆಲಿಕಾಫ್ಟರ್‌ನಿಂದ ಇಳಿದು ಬರುವ ದೃಶ್ಯದೊಂದಿಗೆ ಸೆರೆಹಿಡಿಯಲಾಗಿದೆಯಂತೆ ಎಂ ಆರ್ ಚಿತ್ರದ ಪೋಟೋವನ್ನು. ಇಂತಹ ಪೋಟೋಶೂಟ್ ಚಿನಿರಂಗಕ್ಕೆ ಅಚ್ಚರಿಯೇ ಸರಿ!
