ರೋಟರಿ ಕ್ಲಬ್ ಪುತ್ತೂರು ಯುವ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಅತ್ತಾವರದ ಲಾಯಲ್ಟಿ ಕಾರ್ಡ್ ನೋಂದಣಿ ಶಿಬಿರವು ಡಿ.7 ರಂದು ಬೆಳಿಗ್ಗೆ 10 ಗಂಟೆಯಿ0ದ12.30 ರವರೆಗೆ ಪುತ್ತೂರಿನ ಸೈನಿಕ ಭವನ ರಸ್ತೆಯ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಲಿದೆ.

91 ದಿವಸದ ಶಿಶುವಿನಿಂದ ಹಿಡಿದು 90 ವರ್ಷದ ಹಿರಿಯ ನಾಗರಿಕರವರೆಗೂ ಈ ಯೋಜನೆಯ ಸದಸ್ಯರಾಗಲು ಅರ್ಹತೆಯಿದ್ದು, ಬಾಣಂತನದ ಸವಲತ್ತು, ಒಳರೋಗಿ ಬಿಲ್ಲಿನಹ ಮೇಲೆ ರಿಯಾಯಿತಿ, ಹೊರರೋಗಿ ಸೌಲಭ್ಯಗಳು ಈ ಮುಖೇನ ಲಭ್ಯವಿದೆ. ಕುಟುಂಬವೊ0ದರಿ0ದ 5 ಜನ 300ರೂ.ವಿನಂತೆ ಶುಲ್ಕ ಪಾವತಿಸಿ ಸದಸ್ಯರಾಗಲು ಅವಕಾಶವಿದ್ದು, ಈ ಮೂಲಕ ವಿಶೇಷ ರಿಯಾಯಿತಿ ಸೌಲಭ್ಯಗಳನ್ನು ಪಡೆದೊಕೊಳ್ಳಲು ಸಾಧ್ಯವಿದೆ.ನೋಂದಣಿಗೆ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ದಾಖಲೆಯನ್ನು ಒದಗಿಸವಂತೆ ಈ ಮೂಲಕ ತಿಳಿಸಿದ್ದಾರೆ.