ಯುವ ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು,ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಬಂಟರ ಸಂಘ,ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಪರಾರಿ ಗುತ್ತು ಪೃಥ್ವಿ ಆಳ್ವ ಇವರಿಗೆ ಚಾವಡಿ ತಮ್ಮನ ಕಾರ್ಯಕ್ರಮವು ನಡೆಯಿತು.
‘ಮಿಸ್ ಟೂರಿಸಮ್ ಇಂಟರ್ನ್ಯಾಷನಲ್’ಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಕರಾವಳಿಯ ಪೃಥ್ವಿ ಆಳ್ವ ಆಯ್ಕೆ
ಅಕ್ಟೋಬರ್ ತಿಂಗಳಿನಲ್ಲಿ ಚೀನಾದಲ್ಲಿ ನಡೆಯಲಿರುವ ‘ಮಿಸ್ ಟೂರಿಸಮ್ ಇಂಟರ್ನ್ಯಾಷನಲ್’ ಜಾಗತಿಕ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕರಾವಳಿಯ ಯುವ ಪ್ರತಿಭೆ ಪೃಥ್ವೀ ಆಳ್ವ ಅವರು ತಮ್ಮದಾಗಿಸಿಕೊಂಡಿದ್ದಾರೆ. ಪೆರಾಬೆಯ ಪರಾರಿ ಗುತ್ತಿನ ಪವಿತ್ರಾ ಜೆ. ಆಳ್ವ ಹಾಗೂ ಸುಜೀರ್ ಗುತ್ತಿನ ಜಗದೀಶ್ ಆಳ್ವ ಅವರ ಪುತ್ರಿಯಾಗಿರುವ ಪೃಥ್ವೀ ಆಳ್ವ ಅವರು ಮುಡಿಪುವಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದುಕೊಂಡು ಬಳಿಕ ಮುಕ್ಕದಲ್ಲಿರುವ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ತಮ್ಮ ಮೂರನೇ ವರ್ಷದ ಎಂಬಿಬಿಎಸ್ ಪದವಿ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಇದಲ್ಲದೇ ಕ್ರೀಡಾ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದ ಇವರು ತಮ್ಮ 15ನೇ ವಯಸ್ಸಿನಲ್ಲಿ ಹೈಜಂಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. 2015ರಲ್ಲಿ ಎನ್.ಸಿ.ಸಿ. ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಪೃಥ್ವೀ ಅವರು ಭಾಗವಹಿಸಿದ್ದರು. ಪುಣೆಯಲ್ಲಿರುವ ತಿಯಾರಾ ಪೆಜೆಂಟ್ ಸ್ಟುಡಿಯೋದಲ್ಲಿ ರಿತಿಕಾ ರಾಮ್ತಿç ಅವರ ಬಳಿಯಲ್ಲಿ ಮಾಡೆಲಿಂಗ್ ತರಬೇತಿಯನ್ನು ಪಡೆದುಕೊಂಡಿರುವ ಪೃಥ್ವೀ ಆಳ್ವ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯೂ ಆಗಿದ್ದಾರೆ. ಬಾಲಿವುಡ್ ನಟಿ ಹಾಗೂ ಮಾಡೆಲ್‌ಗಳಾಗಿರುವ ಮಾನುಷಿ ಚಿಲ್ಲರ್, ಊರ್ವಶಿ ರೌಟೆಲಾ ಅವರೂ ಸಹ ಇದೇ ಸಂಸ್ಥೆಯಲ್ಲಿ ಮಾಡೆಲಿಂಗ್ ತರಬೇತಿಯನ್ನು ಪಡೆದುಕೊಂಡವರಾಗಿದ್ದಾರೆ.
‘ಮಿಸ್ ಟೂರಿಸಮ್ ಇಂಟರ್ನ್ಯಾಷನಲ್’ ಸ್ಪರ್ಧಿಗಳ ಆಯ್ಕೆಗಾಗಿ ನಡೆದ ಆನ್‌ಲೈನ್ ಆಡಿಷನ್‌ನಲ್ಲಿ ಭಾಗವಹಿಸಿದ್ದ ಪೃಥ್ವೀ ಆಳ್ವ ಅವರು ಅಲ್ಲಿ ವಿವಿಧ ಸುತ್ತುಗಳಲ್ಲಿ ಭಾಗವಹಿಸಿ ಸೈ ಎಣಿಸಿಕೊಳ್ಳುವ ಮೂಲಕ ಈ ಅಂತಾರಾಷ್ಟಿçÃಯ ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಅಚ್ಚರಿಯ ಆಯ್ಕೆಯಾಗಿದ್ದಾರೆ.
ಡಿ’ ಟಚ್ ಇಂಟರ್ನ್ಯಾಷನಲ್ ಫೌಂಡೇಶನ್ ಪ್ರತೀ ವರ್ಷ ನಡೆಸುತ್ತಿರುವ ಸೌಂದರ್ಯ ಸ್ಪರ್ಧೆ ಇದಾಗಿದ್ದು ೬೦ಕ್ಕೂ ಹೆಚ್ಚು ದೇಶಗಳು ಇದರ ಸದಸ್ಯತ್ವವನ್ನು ಹೊಂದಿವೆ. ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಬಾಂಧವ್ಯ ವೃದ್ಧಿಯ ಉದ್ದೇಶದಿಂದ 1994ರಲ್ಲಿ ಈ ಸಂಸ್ಥೆ ಕೌಲಾಲಂಪುರದಲ್ಲಿ ಸ್ಥಾಪನೆಗೊಂಡಿದೆ.2001, 2008ರಲ್ಲಿ ಭಾರತದಲ್ಲಿ ಈ ಸ್ಪರ್ಧೆ ನಡೆದಿತ್ತು. ಈವರೆಗೆ ಇಬ್ಬರು ಭಾರತೀಯರು ‘ಮಿಸ್ ಟೂರಿಸಮ್ ಇಂಟರ್ನ್ಯಾಷನಲ್’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಈ ಸಾಲಿನ ‘ಮಿಸ್ ಟೂರಿಸಮ್ ಇಂಟರ್ನ್ಯಾಷನಲ್’ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಪೃಥ್ವೀ ಆಳ್ವ ಅವರು ವಿಜಯಿಯಾಗುವ ಮೂಲಕ ‘ಮಿಸ್ ಟೂರಿಸಮ್ ಇಂಟರ್ನ್ಯಾಷನಲ್’ ಸೌಂದರ್ಯ ರಾಣಿಯಾಗಿ ಮೂಡಿಬಂದು ದೇಶಕ್ಕೆ ಮೂರನೇ ಬಾರಿಗೆ ಚಾಂಪಿಯನ್ ಗೌರವವನ್ನು ತಂದುಕೊಡಲಿ ಎಂಬ ಹಾರೈಕೆಯೊಂದಿಗೆ ಡಿ. 4ರಂದು ಸಂಜೆ 4 ಗಂಟೆಗೆ ಪುತ್ತೂರು ಬಂಟರ ಭವನ ಚಾವಡಿಯಲ್ಲಿ ಚಾವಡಿ ತಮ್ಮನ ಕಾರ್ಯಕ್ರಮ ನಡೆಯಿತು.