ಪುತ್ತೂರು : ಇಲ್ಲಿನ ಪ್ರಸಿದ್ಧ ಸೈಯದ್ ಮಲೆ ಜುಮ್ಮ ಮಸ್ಜಿದ್ ನವೀಕರಣ ಕಾರ್ಯಕ್ರಮಕ್ಕೆ ಖ್ಯಾತ ವಿದ್ವಾಂಸರು ಹಾಗೂ ಸುಮಾರು 45 ವರ್ಷಗಳಿಗಿಂತ ಹೆಚ್ಚಿನ ಕಾಲ ಇಲ್ಲಿ ಸೇವೆ ಮಾಡುತ್ತಿರುವಂತಹ ಅಲ್ಹಾಜ್ ಸೈಯದ್ ಮೊಹಮ್ಮದ್
ತಂಙಲ್ ರವರು ಜು.1 ರಂದು ಸಾಂಕೇತಿಕವಾಗಿ ಚಾಲನೆ ನೀಡಿದರು.
ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಊರಿನವರ ಸಹಾಯದಿಂದ ನವೀಕರಣಗೊಳ್ಳುವ ಈ ಮಸ್ಜಿದ್, ಪುತ್ತೂರಿನ ಅತ್ಯಂತ ಎತ್ತರ ಪ್ರದೇಶದ ರಮಣೀಯ ಸ್ಥಳದಲ್ಲಿ ನೆಲೆ ನಿಂತಿದೆ. ಈ ಪ್ರದೇಶದಲ್ಲಿ ಮದ್ರಸ , ಖಬರ್ ಸ್ಥಾನ ಹಾಗೂ ಯತೀಂಖಾನಗಳು ಕಾರ್ಯಚರಿಸುತ್ತಿವೆ.
ಈ ಸಂದರ್ಭದಲ್ಲಿ ಸೈಯದ್ ಮಲೆ ಜುಮಾ ಮಸ್ಜಿದ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅನ್ಸಾರುದ್ದೀನ್ ಜಮಾತ್ ಕಮಿಟಿ ಕೋಶಾಧಿಕಾರಿ ಇಸ್ಮಾಯಿಲ್ ಸಾಲ್ಮರ, ಅನ್ಸಾರುದ್ದೀನ್ ಜಮಾತ್ ಕಮಿಟಿ ಸದಸ್ಯರಾದ ಅಬ್ದುಲ್ ಹಮೀದ್ ಸಾಲ್ಮರ, ಸೈಯದ್ ಮಲೆ ಜುಮ್ಮಾ ಮಸ್ಜಿದ್ ನ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಮುಅಲ್ಲಿಂ ಗಳಾದ ಮೋಹಿಯುದ್ದಿನ್ ಯಮಾನಿ, ಇಬ್ರಾಹಿಂ ಮುಸ್ಲಿಯಾರ್, ಇಂಜಿನಿಯರ್ ಆರೀಫ್ ,ನಜೀರ್ ತಾರಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.