ಉಪ್ಪಿನಂಗಡಿ: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವರು ಬಾರ್ವೊಂದರ ಬಳಿ ಬಿದ್ದು ಮೃತಪಟ್ಟ ಘಟನೆ ಅ.16ರಂದು ಬೆಳಕಿಗೆ ಬಂದಿದೆ.
ಪುತ್ತೂರು ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ನಾಗೇಶ್ ಸಪಲ್ಯ (56 ವ.) ಮೃತ ವ್ಯಕ್ತಿ. ಈ ಬಗ್ಗೆ ಅವರ ಪುತ್ರ ಚೇತನ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ತಂದೆ ವಿಪರೀತ ಕುಡಿತದ ಚಟ ಹೊಂದಿದ್ದು, ಸುಮಾರು ವರ್ಷಗಳ ಹಿಂದೆ ಹೆಂಡತಿಯೊಂದಿಗೆ ಗಲಾಟೆ ಮಾಡಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋದವರು ಸಿಕ್ಕಿದ್ದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಅ.15ರಂದು ರಾತ್ರಿ ಸುಮಾರು 10:30ರಿಂದ ಅ.16ರ ಬೆಳಗ್ಗೆ 7:30 ಮಧ್ಯೆ ಅವರು ಉಪ್ಪಿನಂಗಡಿಯ ಬಾರ್ ಬಳಿ ಬಿದ್ದು ಮೃತಪಟ್ಟಿದ್ದು, ಇವರಿಗೆ ವಿಪರೀತ ಕುಡಿತದ ಚಟ ಇದ್ದಿದ್ದರಿಂದ ಯಾವುದೋ ಖಾಯಿಲೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು’ ಎಂದು ತಿಳಿಸಿದ್ದಾರೆ.

























