ವಿಟ್ಲ : ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕೇಪುವಿನಲ್ಲಿ ಶಾಲಾ ಪ್ರಾರಂಭೋತ್ಸವವು ಜು.1 ರಂದು ನಡೆಯಿತು.
2021-2022 ನೇ ಸಾಲಿನಲ್ಲಿ ಕೇಪು ಶಾಲೆಗೆ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸರಕಾರ ಅನುಮತಿಯನ್ನು ನೀಡಿದೆ. ಶಾಲಾ ಪ್ರಾರಂಭೋತ್ಸವನ್ನು ಸರಳವಾಗಿ ನಡೆಸಲಾಯಿತು.ಶಾಲೆಯ ಹಿರಿಯ ವಿದ್ಯಾರ್ಥಿನಿ ಕು. ಪ್ರೇಕ್ಷ 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಂಡ ಕು.ದಿಶಾರಿಗೆ ಹೂ ಕೊಡುವುದರ ಮೂಲಕ ಸ್ವಾಗತಿಸಿದರು.
ಸಭಾಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ಇವರು ವಹಿಸಿ ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ಪ್ರಬಂಧಕರಾದ ರಾಮಕೃಷ್ಣ ಭಟ್ ಇವರು ಬ್ಯಾಂಕಿನಿಂದ ಕೊಡಲ್ಪಟ್ಟ 92,000/- ರೂ. ಮೌಲ್ಯದ ಪೀಠೋಪಕರಣವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಪುರುಷೋತ್ತಮ ಗೌಡ, ಶ್ರೀಮತಿ ದಮಯಂತಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಶ್ರೀಮತಿ ಮೋಹಿನಿ, ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಕೃಷ್ಣ ಮೂರ್ತಿಕಟ್ಟೆ ಉಪಸ್ಥಿತರಿದ್ದರು. ಕು.ವಸುಧಾ ಜಿ.ಯನ್ ಇವರು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಭಾಗೀರಥಿ ಸ್ವಾಗತಿಸಿ, ಸಹ ಶಿಕ್ಷಕಿ ನೀತಾ ಪ್ರಸ್ತಾವನೆಗೈದರು, ಸಹ ಶಿಕ್ಷಕಿ ಚಿನ್ನಮ್ಮ ನಿರೂಪಿಸಿ ಕು. ಅಕ್ಷತಾ ವಂದಿಸಿದರು.