ಪುತ್ತೂರು: ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಗೋಳಿತ್ತಡಿ ನಿವಾಸಿ ನಾರಾಯಣ ರೈ ಯವರ ಮನೆಯು ಭಾರಿ ಮಳೆಯ ಕಾರಣದಿಂದಾಗಿ ಅರ್ಧ ಭಾಗ ಕುಸಿದಿದ್ದು, ಬಡ ಕುಟುಂಬದವರಾದ ಅವರಿಗೆ ಮನೆ ಮರು ನಿರ್ಮಾಣ ಮಾಡಲು ದಿಕ್ಕು ತೋಚದಿರುವ ಸಂದರ್ಭದಲ್ಲಿ ಮನೆಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರು ಖುದ್ದು ಭೇಟಿ ನೀಡಿ ಕುಸಿದ ಮನೆಯನ್ನು ವೀಕ್ಷಿಸಿದರು ಅಲ್ಲದೆ ಮೂರು ತಿಂಗಳೊಳಗೆ ಎಲ್ಲರ ಸಹಕಾರದೊಂದಿಗೆ ಮನೆಯನ್ನು ಮರು ನಿರ್ಮಾಣ ಮಾಡಿಕೊಡುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೋಟ್ ,ಉಪ್ಪೇಂದ್ರ ಬಲ್ಯಾಯ, ಉದ್ಯಮಿ ಸದಾಶಿವ ರೈ ಸೂರಂಬೈಲು, ಪಿಡಬ್ಲ್ಯೂ ಗುತ್ತಿಗೆದಾರರಾದ ಜಗನ್ಮೋಹನ ರೈ ಸೂರಂಬೈಲು, ರವಿ ಭಂಡಾರಿ ಪಾಣಾಜೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.