ಪುತ್ತೂರು : ಕೋವಿಡ್ ಸಮಯದಲ್ಲಿ ಕಾರ್ಯನಿರತರಾಗಿದ್ದ ಪುತ್ತೂರು ಘಟಕದ ಹೋಂ ಗಾರ್ಡ್ಸ್ ಗಳಿಗೆ ಪ್ರತಿದಿನ ಬೆಳಗ್ಗೆ ಬೇರೆ ಬೇರೆ ರೀತಿಯ ಆರೋಗ್ಯವರ್ಧಕ ಜ್ಯೂಸ್ ಗಳನ್ನು ಹಾಗೂ ಸಂಜೆ ಕಷಾಯವನ್ನು ನೀಡುತ್ತಿದ್ದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರಲ್ಲಿ ಒಬ್ಬರಾದ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ದರ್ಬೆ ಪುತ್ತೂರು ಇದರ ನೃತ್ಯಗುರು ವಿದ್ವಾನ್ ಬಿ. ಗಿರೀಶ್ ಕುಮಾರ್ ಅವರನ್ನು ಅವರ ಮನೆಯಲ್ಲಿ ಹೋಂ ಗಾರ್ಡ್ ಪುತ್ತೂರು ಘಟಕದ ಘಟಕ ಅಧಿಕಾರಿ ಅಭಿಮನ್ಯು ರೈ ಮತ್ತು ಸಿಬ್ಬಂದಿಗಳು ಹೂಗುಚ್ಚ ಹಾಗೂ ಮಹಾಲಿಂಗೇಶ್ವರನ ದೇವರ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾರ್ಜೆಂಟ್ ಗಳಾದ ಜಗನ್ನಾಥ್, ಸುದರ್ಶನ ಜೈನ್ ಮತ್ತು ಸಿಬ್ಬಂದಿಗಳಾದ ಸತ್ಯನಾರಾಯಣ ಭಟ್, ಸೈಯದ್ ಇಬ್ರಾಹಿಂ, ದಿವಾಕರ, ಮತ್ತು ಅಜ್ಹೀಸ್, ಶ್ರೀಮೂಕಾಂಬಿಕ ಕಲ್ಚರಲ್ ಅಕಾಡೆಮಿ ಇದರ ಸಂಚಾಲಕರಾದ ಶ್ರೀಮತಿ ಪ್ರಭಾ ಬಿ.ಶಂಕರ್, ಗುರುಗಳಾದ ವಿದ್ವಾನ್ ಬಿ ದೀಪಕ್ ಕುಮಾರ್ ಹಾಗೂ ವಿದುಷಿ ಶ್ರೀಮತಿ ಪ್ರೀತಿಕಲಾ ಉಪಸ್ಥಿತರಿದ್ದರು.