ವಿಟ್ಲ : ವಿಟ್ಲ ಠಾಣಾ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಉತ್ತರಕನ್ನಡ ಜಿಲ್ಲೆಯ ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡಿರುವ ವಿನೋದ್ ಕುಮಾರ್ ರೆಡ್ಡಿಯವರಿಗೆ ಪಂಚಶ್ರೀ ಗ್ರೂಪ್ (ರಿ) ವಿಟ್ಲ ವತಿಯಿಂದ ಜು.4 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಸರಕಾರಿ ಉದ್ಯೋಗವನ್ನು ವೃತ್ತಿಯೆಂದು ತಿಳಿಯದೆ
ಕರ್ತವ್ಯ ಪ್ರಜ್ಞೆಯಿಂದ ಕೆಲಸ ನಿರ್ವಹಿಸಿ, ದ.ಕ. ಜಿಲ್ಲೆಯ
ಬಂಟ್ವಾಳ ತಾಲೂಕಿನ ಕೇರಳ ಗಡಿಭಾಗವಾದ ಅತ್ಯಂತ ಸೂಕ್ಷ್ಮ ಪ್ರದೇಶವಾದ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಅತ್ಯಂತ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ವಿಟ್ಲ ಭಾಗದ ಎಲ್ಲಾ ಜನರ ಪ್ರೀತಿ ಪಾತ್ರರಾಗಿ ವಿಟ್ಲದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿನೋದ್ ರೆಡ್ಡಿಯವರು ಯಶಸ್ವಿಯಾಗಿದ್ದರು.
ಈ ಸಂದರ್ಭದಲ್ಲಿ ಶರತ್ ಎನ್ ಎಸ್,ಬ್ರಿಜೇಶ್ ವಿಟ್ಲ, ಪ್ರವೀಣ್, ಶಿವರಾಜ್ ದೇವಾಡಿಗ,ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.