ಬಂಟ್ವಾಳ: ಕುಳ ಗ್ರಾಮದ ಅಳಕೆಮಜಲು ನಿವಾಸಿ, ವಾಸ್ತುತಜ್ಞ ಬಾಬುರಾಯ ಆಚಾರ್ಯ (75) ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ವಾಸ್ತುತಜ್ಞರಾಗಿದ್ದ ಅವರು ಹಲವು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಂಗಳೂರಿನ ಕಾಳಿಕಾಂಬಾ ದೇವಸ್ಥಾನದ ಅಳಕೆಮಜಲು ಕೂಡುವಳಿಕೆಯ ಮುಕ್ತಸರರಾಗಿದ್ದ ಅವರು, ಅಳಕೆಮಜಲು ಕುಟುಂಬದ ಹಿರಿಯರಾಗಿದ್ದರು. ಸ್ಥಳೀಯ ಹಲವು ಧಾರ್ಮಿಕ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದ ಅವರು, ತಮ್ಮ ಸರಳ ಹಾಗೂ ಸ್ನೇಹಮಯಿ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದರು.
ಮೃತರು ಪುತ್ರ, ಸೊಸೆ, ಪುತ್ರಿ, ಅಳಿಯ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ: ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಉರಿಮಜಲು ಕಾರ್ಯಾಡಿ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಂಟ್ವಾಳ: ವಾಸ್ತುತಜ್ಞ ಬಾಬುರಾಯ ಆಚಾರ್ಯ ನಿಧನ