ಪುತ್ತೂರು: ಕೊರೊನಾ ಸಂಕಷ್ಟದ ನಡುವೆ ಸಾಮೂಹಿಕ ಸ್ವಾಸ್ಥ ಕಾಪಾಡುವ ನಿಟ್ಟಿನಲ್ಲಿ 2 ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಅಳವಡಿಸಲಾಗಿದ್ದ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಈಗ ಮತ್ತೆ ಭಕ್ತರಿಗಾಗಿ ತೆರೆದುಕೊಂಡಿದೆ. ಜುಲೈ 5 ಸೋಮವಾರದಿಂದ ಕ್ಷೇತ್ರವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
ಸಾಮಾಜಿಕ ಅಂತರ, ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್, ಮುಂತಾದ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಭಕ್ತರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಲ್ಲಿ ನಂಬಿದವರಿಗೆ ಇಂಬು ಕೊಡುವ ಮತ್ತು ಔಷಧಿಯ ಶಕ್ತಿ ಎರಡೂ ಮೇಳವಿಸಿ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ. ಶ್ರೀ ಕ್ಷೇತ್ರದ ಕಾರಣಿಕ ಶಕ್ತಿಗಳಲ್ಲಿ ಕೊರೊನಾ ಸಂಕಟದಿಂದ ಸರ್ವರನ್ನು ಪಾರು ಮಾಡಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಊರ ಪರವೂರ ಭಕ್ತರು ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೆ ಆಗಮಿಸಿ ಕಾರಣಿಕ ಶಕ್ತಿಗಳ ದರ್ಶನ ಪಡೆದು ಕೃತಾರ್ಥರಾಗಿ ಬೇಕಾಗಿ ಇಂದು ನಡೆದ ಆಡಳಿತ ಸಮಿತಿಯ ಕಾರ್ಯಕಾರಿ ಸಭೆಯ ನಂತರ ಅಧ್ಯಕ್ಷರಾದ ಜಯಂತ ನಡುಬೈಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.