ಪುತ್ತೂರು: ಅನಾಮಧೇಯ ನಂಬರ್‌ನಿಂದ ಯುವಕರೊಬ್ಬರಿಗೆ ಮೆಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬರೆಗಳನ್ನು ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಸಹಚರದೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದು ಕೊಂಡ ವಿಚಾರದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸಂತ್ರಸ್ತ ಯುವಕನ ದೂರಿಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸಂಪ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತ್ರಸ್ತ ನೆಟ್ಟಣಿಗೆ ಮುಡೂರು ಗ್ರಾಮದ ಅಬ್ದುಲ್
ನಾಸಿರ್‌ರವರು ನೀಡಿದ ದೂರಿನಂತೆ ಪುತ್ತೂರು
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 120(2), 384,
420, 506, ಐಪಿಸಿ ಈ 6(4) ಐಟಿ ಅಕ್ಸ್ ನಂತೆ ಪ್ರಕರಣ
ದಾಖಲಾಗಿತ್ತು. ಪ್ರಕರಣದ ಓರ್ವ ಅರೋಪಿತ ಮೂಲತಃ
ಬಂಟ್ವಾಳ ತಾಲೂಕಿನ ತನಿಷಾ ರಾಜ್ ಎಂಬಾಕೆಯನ್ನು
ಜು.2ರಂದು బంధిసి ನ್ಯಾಯಲಯಕ್ಕೆ
ಹಾಜರುಪಡಿಸಲಾಗಿತ್ತು.
ಉಳಿದಂತೆ ಆರೋಪಿಗಳಾದ ನೆಟ್ಟಣಿಗೆ ಮುತ್ತೂರು ಗ್ರಾಮದ ಕೊಟ್ಯಾಡಿ ಕಟ್ಟೆಪುಣಿ ನಿವಾಸಿ ಅಬ್ಬಾಸ್ ಅವರ ಪುತ್ರ ಮಮ್ಮದ್ ಶಾಫಿ ಯಾನೆ ಶಾಫಿ(34), ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಹಂಝ ಅವರ ಪುತ್ರ ಮಹಮ್ಮದ್ ಅಜರುದ್ದೀನ್ ಯಾನೆ ಅಜರ್(30ವ), ಸವಣೂರು ಗ್ರಾಮದ ಮಾಂತೂರು ಅಂಬೇಡ್ಕರ್ ಭವನದ ಬಳಿಯ ಇಸ್ಮಾಯಿಲ್ ಅವರ ಪುತ್ರ ನಝೀರ್ ಎಂ(38ವ) ಎಂಬವರನ್ನು ಸರ್ವೆ ಎಂಬಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ರೂ.7.5ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ರೂ. 5ಲಕ್ಷ ಮೌಲ್ಯದ ಮಾರುತಿ ಬಿಝಾ ಕಾರು, ರೂ.1 ಲಕ್ಷ ಮೌಲ್ಯದ ಆಟೋ ರಿಕ್ಷಾ ಮತ್ತು ಆರೋಪಿಗಳ ಬಳಿಯಿದ್ದ 3 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ಡಾ.ಗಾನ, ಪಿ ಕುಮಾರ್ ಅವರ ನೇತೃತ್ವದಲ್ಲಿ ಪುತ್ತೂರು ಪ್ರಭಾರ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ ನಾಯ್ಕ ಮತ್ತು ಸಂಪ್ಯ ಎಸ್.ಐ ಉದಯರವಿ ಎಂ.ವೈ ಮತ್ತು ಸಿಬ್ಬಂದಿಗಳ ವಿಶೇಷ ತಂಡದಲ್ಲಿ ಅದ್ರಾಮ್, ದೇವರಾಜ್, ಪ್ರವೀಣ್, ಕರುಣಾಕರ್, ಗಾಯತ್ರಿ, ವಿನೋದ್, ಗಣಕಯಂತ್ರದ ವಿಭಾಗದ ಸಂಪತ್ ಹಾಗೂ ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.